ವಾಷಿಂಗ್ಟನ್: ದೀಪಾವಳಿ ಹಿನ್ನೆಲೆ ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಶುಭಾಶಯ ಕೋರಿದ್ದಾರೆ.
ಟ್ರಂಪ್ ಅವರು ಶ್ವೇತಭವನದಲ್ಲಿ ದೀಪವನ್ನು ಬೆಳಗಿಸುವ ಫೋಟೋವನ್ನು ಹಂಚಿಕೊಂಡಿದ್ದು, ಈ ಮುಖಾಂತರ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಕೂಡ ಶುಭಾಶಯ ಕೋರಿದ್ದಾರೆ.
ದೀಪಾವಳಿಯ ಶುಭಾಶಯಗಳು, ನೀವು ದೀಪಗಳನ್ನು ಹಚ್ಚುವಾಗ ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಈ ಋತುವಿನ ಉತ್ಸಾಹವು ಸಂತೋಷ ಮತ್ತು ಬೆಳಕನ್ನು ತರಲಿ ಎಂದು ಬ್ಯೂರೋ ಆಫ್ ಸೌತ್ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ರಾಜ್ಯ ಇಲಾಖೆ ಟ್ವೀಟ್ ಮಾಡಿದೆ.
ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಕೂಡ ಶುಭಾಶಯ ತಿಳಿಸಿದ್ದಾರೆ. ದೀಪಗಳ ಹಬ್ಬವನ್ನು ಆಚರಿಸುವ ಲಕ್ಷಾಂತರ ಹಿಂದೂಗಳು, ಜೈನರು, ಸಿಖ್ರು ಮತ್ತು ಬೌದ್ಧರಿಗೆ ನಾನು ಶುಭಾಶಯ ತಿಳಿಸುತ್ತೇನೆ. ನಿಮ್ಮ ಹೊಸ ಋತುವು ಭರವಸೆ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ. ಸಾಲ್ ಮುಬಾರಕ್ ಎಂದು ಬೈಡನ್ ಟ್ವೀಟ್ ಮಾಡಿದ್ದಾರೆ.
ಯುಎಸ್ ಉಪಾಧ್ಯಕ್ಷೆಯಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಕೂಡ ಶುಭಾಶಯ ತಿಳಿಸಿದ್ದಾರೆ. ದೀಪಾವಳಿ ಮತ್ತು ಸಾಲ್ ಮುಬಾರಕ್ ಶುಭಾಶಯಗಳು. ಪ್ರತಿಯೊಬ್ಬರೂ ಸುರಕ್ಷಿತ, ಆರೋಗ್ಯಕರ ಮತ್ತು ಸಂತೋಷದಾಯಕವಾಗಿರಲಿ ಎಂದು ನಾನು ನಾನು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.