ಕರ್ನಾಟಕ

karnataka

ETV Bharat / international

ಹತ್ತನೇ ಬಾರಿ ತಾತನಾದ ಟ್ರಂಪ್​: ಅಮೆರಿಕ ಅಧ್ಯಕ್ಷನಿಗೆ ಎಷ್ಟು ಪತ್ನಿಯರು? ಎಷ್ಟು ಮಕ್ಕಳು? - ನ್ಯೂಯಾರ್ಕ್​

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಾತನಾಗುತ್ತಿದ್ದಾರೆ. ಟ್ರಂಪ್​ ಸೊಸೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿರುವುದನ್ನು ಟ್ರಂಪ್​ ಪುತ್ರ ಎರಿಕ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹತ್ತನೇ ಬಾರಿ ತಾತನಾದ ಟ್ರಂಪ್

By

Published : Aug 20, 2019, 11:11 PM IST

ನ್ಯೂಯಾರ್ಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಹತ್ತನೇ ಬಾರಿಗೆ ತಾತನಾಗುತ್ತಿದ್ದಾರೆ. ಅವರ ಸೊಸೆ ಲಾರಾ ಲಿಯಾ ಟ್ರಂಪ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿರುವುದನ್ನು ಟ್ರಂಪ್​ ಪುತ್ರ ಎರಿಕ್​ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಾರಾ ಮತ್ತು ಎರಿಕ್​ ಅವರಿಗೆ ಇದು ಎರಡನೇ ಮಗು. ಈ ದಂಪತಿಯ ಮೊದಲ ಮಗು ಎರಿಕ್​ ಲ್ಯೂಕ್​ ಟ್ರಂಪ್​ಗೆ ಎರಡು ವರ್ಷ ತುಂಬಿದೆ.

73 ವರ್ಷದ ಟ್ರಂಪ್​ ಅವರು ಮೂವರು ಪತ್ನಿಯರಿಂದ ಒಟ್ಟು ಐವರು ಮಕ್ಕಳನ್ನು ಹೊಂದಿದ್ದಾರೆ. ಇವರ ಮೊದಲ ಮಗ ಡೊನಾಲ್ಡ್​ ಜೂನಿಯರ್​ ಮತ್ತು ಪುತ್ರಿ ವಂಕಾ ಅವರು ಕ್ರಮವಾಗಿ ಐದು ಹಾಗೂ ಮೂವರು ಮಕ್ಕಳನ್ನು ಹೊಂದಿದ್ದಾರೆ. ಎರಿಕ್​ ಟ್ರಂಪ್​ ಅವರು ಟ್ರಂಪ್​ ಅವರ ಮೂರನೇ ಪುತ್ರ.

ABOUT THE AUTHOR

...view details