ಅಟ್ಲಾಂಟಾ (ಜಾರ್ಜಿಯಾ): ಇಲ್ಲಿನ ನಾಯಿಯೊಂದರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ಯುಎಸ್ನಲ್ಲಿ ಎರಡನೇ ನಾಯಿಗೆ ಕೋವಿಡ್-19 ಬಾಧಿಸಿದಂತಾಗಿದೆ.
ನಾಯಿಯ ಮಾಲೀಕರಿಗೂ ಕೊರೊನಾ ವೈರಸ್ ದೃಢಪಟ್ಟಿತ್ತು. ಬಳಿಕ ಶ್ವಾನ ಕೋವಿಡ್-19ನೊಂದಿಗೆ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿತ್ತು ಎಂದು ಜಾರ್ಜಿಯಾ ಆರೋಗ್ಯ ಇಲಾಖೆ ತಿಳಿಸಿದೆ.
ಶ್ವಾನದ ಪರೀಕ್ಷಾ ವರದಿಯಲ್ಲಿ ಕೋವಿಡ್-19 ಗೆ ಕಾರಣವಾಗುವ SARS-CoV-2 ಪಾಸಿಟಿವ್ ಬಂದಿತ್ತು. ನರವೈಜ್ಞಾನಿಕ ಕಾಯಿಲೆ ಉಲ್ಬಣಗೊಳ್ಳುತ್ತಿದ್ದಂತೆಯೇ ನಾಯಿಯನ್ನು ದಯಾಮರಣಗೊಳಿಸಲಾಯಿತು.
ಇದುವರೆಗೆ ಲಭ್ಯವಿರುವ ಸೀಮಿತ ಮಾಹಿತಿಯ ಆಧಾರದ ಮೇಲೆ, ಸಾಕುಪ್ರಾಣಿಗಳು ಜನರಿಗೆ ಕೊರೊನಾ ವೈರಸ್ ಹರಡುವ ಅಪಾಯ ಬಹಳ ಕಡಿಮೆ ಎಂದು ಪರಿಗಣಿಸಲಾಗಿದೆ. ಆದರೂ ಜನ ಎಚ್ಚರಿಕೆಯಿಂದ ಇದ್ದು ಅಂತರ ಕಾಪಾಡಿಕೊಳ್ಳಬೇಕಿದೆ.