ಕರ್ನಾಟಕ

karnataka

ETV Bharat / international

ಮಲೇರಿಯಾ ಔಷಧಿಯ ಕೋರ್ಸ್​ ಕಂಪ್ಲೀಟ್​​ ಮಾಡಿದ ಟ್ರಂಪ್​​: ವೈದ್ಯರಿಂದ ವರದಿ

ಕೊರೊನಾ ವೈರಸ್​ ರೋಗವನ್ನು ಮಲೇರಿಯಾಕ್ಕೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಯಿಂದ ಗುಣಪಡಿಸಲು ಸಾಧ್ಯ ಎಂಬ ಮಾತು ಕೇಳಿ ಬಂದ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಈ ಮಾತ್ರಗಳನ್ನು ಪ್ರಾಯೋಗಿಕವಾಗಿ ಸೇವಿಸಿದ್ದು, ಟ್ರಂಪ್​ ದೇಹ ಸ್ಥಿತಿಯ ವರದಿಯನ್ನು ವೈದ್ಯರು ನೀಡಿದ್ದಾರೆ.

Trump
ಟ್ರಂಪ್

By

Published : Jun 5, 2020, 12:52 AM IST

ವಾಷಿಂಗ್ಟನ್(ಅಮೆರಿಕಾ):ಕೊರೊನಾ ವೈರಸ್ ತಡೆಗಟ್ಟುವಿಕೆಯ ಪ್ರಯತ್ನದ ಸಲುವಾಗಿ ಮಲೇರಿಯಾಕ್ಕೆ ಬಳಸಲಾಗುವ ಔಷಧವನ್ನು ಎರಡು ವಾರಗಳ ಕಾಲ ಅಧ್ಯಕ್ಷ ಟ್ರಂಪ್​ ಸೇವಿಸಿದ್ದು, ಇದರ ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಲು ಶ್ವೇತಭವನದ ವೈದ್ಯಕೀಯ ತಂಡ ಟ್ರಂಪ್​ ಬಗ್ಗೆ ತೀವ್ರ ಗಮನ ಹರಿಸಿತ್ತು ಎಂದು ಬುಧವಾರ ವರದಿಯಾಗಿದೆ.

ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಎರಡು ವಾರಗಳ ಕಾಲ ಮಲೇರಿಯಾ ರೋಗಕ್ಕೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಯನ್ನು ಸೇವಿಸಿದ್ದು, ಟ್ರಂಪ್​​​ ಆರೋಗ್ಯ ಸ್ಥಿತಿಯ ಬಗ್ಗೆ ಡಾ. ಸೀನ್​ ಕೋನ್ಲೆ ವರದಿ ಸಲ್ಲಿಸಿದ್ದಾರೆ.

ಈ ವರದಿಯಲ್ಲಿ ಡಾ.ಸೀನ್​ ಕೋನ್ಲೆ ಟ್ರಂಪ್ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದು, ಈ ಹಿಂದಿನ ಆರೋಗ್ಯ ಸ್ಥಿತಿಗತಿಗೂ, ಪ್ರಸ್ತುತವಾಗಿಯು ಸ್ವಲ್ಪ ಬದಲಾವಣೆಯಾಗಿದೆ. ಈ ಮಾತ್ರೆಯಿಂದಾಗಿ ಅವರ ದೇಹದಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದ್ದಾರೆ.

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಬುಧವಾರ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಕೊರೊನಾ ವೈರಸ್​​ನಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಪ್ಲೇಸಿಬೊ ಮಾತ್ರೆಗಳಿಗಿಂತ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ತಮವಾಗಿಲ್ಲ ಎಂದಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದಿಂದಾಗಿ ದೇಹದ ಮೇಲೆ ಗಂಭೀರ ಹಾನಿಯಾಗುವುದಿಲ್ಲ ಆದರೆ, ಶೇ.40% ರಷ್ಟು ಅಡ್ಡಪರಿಣಾಮಗಳನ್ನು ಬೀರಲಿದೆ, ಹೆಚ್ಚಾಗಿ ಹೊಟ್ಟೆಯ ತೊಂದರೆಗಳು ಉದ್ಬವವಾಗಲಿದೆ ಎಂದು ಪ್ರಕಟಿಸಿದೆ.

ಅಧ್ಯಕ್ಷ ಟ್ರಂಪ್​ರನ್ನು ಈ ಹಿಂದೆ ಎರಡು ಬಾರಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಮೊದಲು 2019 ನವೆಂಬರ್‌ನಲ್ಲಿ ಮತ್ತು ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ. ಈ ತಪಾಸಣೆಯಲ್ಲಿ ಟ್ರಂಪ್​ ಎದೆ ಬಡಿತ ನಿಮಿಷಕ್ಕೆ 63 ಬಾರಿಯಾಗಿತ್ತು ಎಂದ ಡಾ.ಸೀನ್​ ಕೋನ್ಲೆ, ವಯಸ್ಕರಿಗೆ ಸಾಮಾನ್ಯ ವಿಶ್ರಾಂತಿ ಹೃದಯ ಬಡಿತ ನಿಮಿಷಕ್ಕೆ 60 ರಿಂದ 100 ಬೀಟ್ಸ್ ಆಗಿದ್ದು, ಇದು ಉತ್ತಮ ಹೃದಯ ರಕ್ತನಾಳದ ಫಿಟ್ನೆಸ್ ಅನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details