ವಾಷಿಂಗ್ಟನ್:ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗಕ್ಕೆ ಸೆನೆಟ್ ಸಿದ್ದವಾಗಿದ್ದು, ದೋಷಾರೋಪಣೆ ಕುರಿತು ಮಂಗಳವಾರ ಸುದೀರ್ಘ ವಿಚಾರಣೆ ನಡೆಯಿತು.
ಪಟಾಕಿ ಸಿಡಿಸುವುದರೊಂದಿಗೆ ದೋಷಾರೋಪಣೆ ವಿಚಾರಣೆಯು ಮಂಗಳವಾರ ಆರಂಭವಾಯಿತು. ಟ್ರಂಪ್ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಂತೆ ರಿಪಬ್ಲಿಕನ್ ಸದಸ್ಯರ ಬಳಿ ಯಾವುದೇ ಹೊಸ ಪುರಾವೆಗಳಿಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಲೆಕೆಳಗಾದ ನಿಯಮಗಳು:
ಸೆನೆಟ್ ಮೆಜಾರಿಟಿ ಲೀಡರ್ ಮಿಚ್ ಮೆಕ್‌ಕಾನ್ನೆಲ್ ಎರಡೂ ಕಡೆಯವರ ವಾದಗಳನ್ನು ಮಂಡಿಸಲು 2 ದಿನಗಳ ವೇಳಾಪಟ್ಟಿಯನ್ನ ವಿಧಿಸಿದ್ದರು. ಈ ಪ್ರಕಾರ ಆದಷ್ಟು ಬೇಗ ವಿಚಾರಣೆ ಮುಗಿಯಬೇಕು ಮತ್ತು ದೋಷಾರೋಪಣೆ ವಿಚಾರಣೆ ವೇಳೆ ಸಲ್ಲಿಸಿದ ದಾಖಲೆಗಳಿಗೆ ಬೇಗ ಮತ ಚಲಾಯಿಸುವಂತೆ ಒತ್ತಾಯ ಪಡಿಸಿದಂತಿತ್ತು ಅವರ ಯೋಜನೆ.
ಈ ಪ್ರಸ್ತಾಪ ಡೆಮಾಕ್ರಟಿಕ್ ಪಕ್ಷದ ಸದಸ್ಯರನ್ನು ಕೆರಳಿಸಿದ್ದಲ್ಲದೆ ಪ್ರತಿಭಟನೆಗೆ ಅವಕಾಶ ನೀಡಿತು. ಹೀಗಾಗಿ ಮೆಕ್‌ಕಾನ್ನೆಲ್ ಶೀಘ್ರವಾಗಿ ಹೆಚ್ಚುವರಿ ದಿನವನ್ನು ಸೇರಿಸಿದರು ಮತ್ತು ಸದನದ ವಿಚಾರಣೆಯ ಪುರಾವೆಗಳನ್ನ ದಾಖಲೆಯಲ್ಲಿ ಸೇರಿಸಬೇಕೆಂದು ಷರತ್ತು ವಿಧಿಸಿದರು.
ಯೂರೋಪ್ನಿಂದ ಟ್ರಂಪ್ ಟ್ವೀಟ್:
ದಾವೋಸ್‌ನಲ್ಲಿ ನಡೆದ ಜಾಗತಿಕ ನಾಯಕರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಟ್ರಂಪ್, 'ಟ್ರಾನ್ಸ್ಕ್ರಿಪ್ಟ್ಗಳನ್ನ ಓದಿ' ಎಂದು ದೋಷಾರೋಪಣೆಯ ಬಗ್ಗೆ ತಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದರು.
ಉಕ್ರೇನ್‌ನಿಂದ ಮಿಲಿಟರಿ ಸಹಾಯ ಪಡೆದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡೆನ್ ಬಗ್ಗೆ ತನಿಖೆ ನಡೆಸಲು ಬಯಸುತ್ತಿದ್ದಾರೆ ಮತ್ತು ಇದನ್ನು ತಡೆಹಿಡಿಯುವ ಮೂಲಕ ಟ್ರಂಪ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷವು ಆರೋಪಿಸಿತು. ಕಾಂಗ್ರೆಸ್ ಅಡ್ಡಿಪಡಿಸಿದ ಆರೋಪದ ಮೇಲೆ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲು ಸದನವು ಮತ ಚಲಾಯಿಸಿತು.
ತಿರಸ್ಕರಿಸಿದ ನಿಯಮಗಳ ಅನುಬಂಧ:
ಉಕ್ರೇನ್ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಸಂವಹನ ಸೇರಿದಂತೆ ಇತರೆ ದಾಖಲೆಗಳಿಗಾಗಿ ಶ್ವೇತಭವನಕ್ಕೆ ರಿಟ್ ನೀಡುವ ಪ್ರಸ್ತಾಪಕ್ಕೆ ತಿದ್ದು ಪಡಿ ನಿಯಮದ ಪ್ರಸ್ತಾಪವನ್ನ ಮುಂದಿಟ್ಟರು. ಆದರೆ. 53-47ರ ಬಹುಮತ ಇರುವ ರಿಪಬ್ಲಿಕನ್ನರ್ ಚಕ್ ಶುಮರ್ ಅವರ ತಿದ್ದುಪಡಿಯನ್ನ ತಿರಸ್ಕರಿಸಿದರು.
ಹೌಸ್ ವ್ಯಾಜ್ಯದಾರರು ಮತ್ತು ಶ್ವೇತಭವನದ ವಕೀಲರು ಆರಂಭಿಕ ವಾದಗಳನ್ನು ಮಂಡಿಸಿದರು. ಹೌಸ್ ಇಂಟೆಲಿಜೆನ್ಸ್ ಸಮಿತಿಯ ಅಧ್ಯಕ್ಷ ಮತ್ತು ಲೀಡ್ ಪ್ರಾಸಿಕ್ಯೂಟರ್ ಆಡಮ್ ಸ್ಕಿಫ್, ಮೆಕ್‌ಕಾನ್ನೆಲ್ ಪ್ರಸ್ತಾಪಿಸಿದ ನಿಯಮಗಳ ಪ್ಯಾಕೇಜ್ ಕಠಿಣ ವಿಚಾರಣೆಯ ಪ್ರಕ್ರಿಯೆ ಮತ್ತು ಮುಚ್ಚಿಡುವಿಕೆಯಾಗಿದೆ ಎಂದು ಹೇಳಿದರು.
ದೋಷಾರೋಪಣಾರ್ಹ ಅಪರಾಧ ಮಾಡಿಲ್ಲ:
ಅಧ್ಯಕ್ಷರ ವಿರುದ್ಧದ ಆರೋಪಗಳು ದೋಷಾರೋಪಣಾರ್ಹ ಅಪರಾಧಗಳಿಗೆ ಸಮನಾಗಿಲ್ಲ ಮತ್ತು ಟ್ರಂಪ್ ಯಾವುದೇ ಅಪರಾಧ ಮಾಡಿಲ್ಲ ಎಂದು ಅಧ್ಯಕ್ಷರ ಪ್ರಮುಖ ವಕೀಲ ವೈಟ್ ಹೌಸ್ ಕೌನ್ಸಿಲ್ ಪ್ಯಾಟ್ ಸಿಪೋಲೋನ್ ಹೇಳಿದ್ದಾರೆ. ಉಕ್ರೇನಿಯನ್ ಅನಿಲ ಕಂಪನಿಯ ಮಾಜಿ ಮಂಡಳಿಯ ಸದಸ್ಯರಾದ ಬಿಡೆನ್ ಮತ್ತು ಅವರ ಮಗ ಹಂಟರ್ ಅವರ ತನಿಖೆಯ ಕೋರಿಕೆಗೆ ಉಕ್ರೇನ್‌ಗೆ ನೆರವು ನೀಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ಸದನದ ವಿಚಾರಣೆಗಳು ಸರ್ಕಸ್ ಆಗಿದ್ದರಿಂದ ಸೆನೆಟ್ನ ವಿಚಾರಣೆ ಅಗತ್ಯವೆಂದು ಅರ್ಥವಲ್ಲ,(Just because the House proceedings were a circus that doesn’t mean the Senate’s trial needs to be)ಎಂದು ಟಿಪಬ್ಲಿಕ್ ಪಕ್ಷದ ಸೆನೆಟರ್ ಲಾಮರ್ ಅಲೆಕ್ಸಾಂಡರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹೆಚ್ಚುವರಿ ಸಾಕ್ಷಿಗಳು ಅಥವಾ ದಾಖಲೆಗಳನ್ನು ನಿರ್ಧರಿಸಲು ಎರಡೂ ಕಡೆ ವಾದಗಳನ್ನು ಕೇಳಿದ ನಂತರ ಮತ ಚಲಾಯಿಸುವುದನ್ನು ಬೆಂಬಲಿಸಿದ್ದು, ಇದನ್ನು ಸೆನೆಟ್ ಪರಿಗಣಿಸಬೇಕು ಎಂದಿದ್ದಾರೆ.
ಇಂದು ನಡೆಯುತ್ತಿರುವ ವಿಚಾರಣೆಯಲ್ಲಿ ಶ್ವೇತಭವನದ ವಕೀಲರು ಈ ಪ್ರಕರಣವನ್ನು ವಜಾಗೊಳಿಸಲು ಕರೆ ನೀಡಿದ್ದು, ಟ್ರಂಪ್ ಅವರ ವಕೀಲ ಜೇ ಸೆಕ್ಯುಲೋ ಅವರು, ಅಧ್ಯಕ್ಷರ ಸಂವಹನಗಳನ್ನು ಕಾರ್ಯನಿರ್ವಾಹಕ ಸವಲತ್ತು ಅಡಿಯಲ್ಲಿ ಒಳಗೊಂಡಿದೆ ಎಂದು ವಾದಿಸಿದ್ದಾರೆ.