ಕರ್ನಾಟಕ

karnataka

ETV Bharat / international

ಕೊರೊನಾ ಎಫೆಕ್ಟ್​.. ಅನಿರ್ದಿಷ್ಟಾವಧಿವರೆಗೂ ಮುಚ್ಚೇ ಇರಲಿದೆ ಡಿಸ್ನಿಲ್ಯಾಂಡ್!! - ಕ್ಯಾಲಿಫೋರ್ನಿಯಾ ಅಡ್ವೆಂಚರ್ ಪಾರ್ಕ್

ಡಿಸ್ನಿಲ್ಯಾಂಡ್ ರೆಸಾರ್ಟ್‌ನ ಭಾಗವಾಗಿರುವ ಡೌನ್ಟೌನ್ ಡಿಸ್ನಿ ಶಾಪಿಂಗ್ ಮತ್ತು ಡೈನಿಂಗ್​ ಡಿಸ್ಟ್ರಿಕ್ಟ್​ ಜುಲೈ 9ರಂದು ಮತ್ತೆ ತೆರೆಯಲಿದೆ..

Disneyland to remain closed indefinitely
ಕೊರೊನಾ ಎಫೆಕ್ಟ್​: ಅನಿರ್ದಿಷ್ಟಾವಧಿವರೆಗೂ ಮುಚ್ಚೇ ಇರಲಿದೆ ಡಿಸ್ನಿಲ್ಯಾಂಡ್

By

Published : Jun 26, 2020, 4:03 PM IST

ಕ್ಯಾಲಿಫೋರ್ನಿಯಾ(ಯುಎಸ್​) :ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್​-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಅನಾಹೈಮ್‌ನ ಡಿಸ್ನಿ ಕ್ಯಾಲಿಫೋರ್ನಿಯಾ ಅಡ್ವೆಂಚರ್ ಪಾರ್ಕ್‌ನ ಅನಿರ್ದಿಷ್ಟ ಅವಧಿಯವರೆಗೂ ತೆರೆಯಲಾಗುವುದಿಲ್ಲ ಎಂದು ವ್ಯವಸ್ಥಾಪಕ ಮಂಡಳಿ ತಿಳಿಸಿದೆ.

ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, ಡಿಸ್ನಿಯು ಹೇಳಿಕೆಯೊಂದರಲ್ಲಿ, "ಜುಲೈ 4ರ ನಂತರವೂ ಸ್ವಲ್ಪ ಸಮಯದವರೆಗೆ ಥೀಮ್ ಪಾರ್ಕ್‌ನ ಪುನಃ ತೆರೆಯುವ ಮಾರ್ಗಸೂಚಿಗಳನ್ನು ನೀಡುವುದಿಲ್ಲ ಎಂದು ಕ್ಯಾಲಿಫೋರ್ನಿಯಾ ರಾಜ್ಯವು ಸೂಚಿಸಿದೆ." ಹೀಗಾಗಿ ಡಿಸ್ನಿಲ್ಯಾಂಡ್ ಅನಿರ್ದಿಷ್ಟಾವಧಿವರೆಗೂ ಮುಚ್ಚೇ ಇರಲಿದೆ ಎಂದು ಸ್ಪಷ್ಟಪಡಿಸಿದೆ.

"ಸರ್ಕಾರದಿಂದ ಮಾರ್ಗಸೂಚಿಗಳು ಯಾವಾಗ ಬಿಡುಗಡೆಯಾಗುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಅನುಮತಿ ದೊರೆಯುತ್ತಿದ್ದಂತೆ ಪುನಃ ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಆದಾಗ್ಯೂ, ಡಿಸ್ನಿಲ್ಯಾಂಡ್ ರೆಸಾರ್ಟ್‌ನ ಭಾಗವಾಗಿರುವ ಡೌನ್ಟೌನ್ ಡಿಸ್ನಿ ಶಾಪಿಂಗ್ ಮತ್ತು ಡೈನಿಂಗ್​ ಡಿಸ್ಟ್ರಿಕ್ಟ್​ ಜುಲೈ 9ರಂದು ಮತ್ತೆ ತೆರೆಯಲಿದೆ.

ABOUT THE AUTHOR

...view details