ವಾಷಿಂಗ್ಟನ್( ಅಮೆರಿಕ): ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿ ಕಿಂಬರ್ಲಿ ಗಿಲ್ಫಾಯ್ಲ್ ತನ್ನನ್ನು ಅಮೆರಿಕದ ಮೊದಲ ತಲೆಮಾರಿನ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾರೆ.
ಡೆಮಾಕ್ರಟಿಕ್ಸ್ಗಳು ಅಮೆರಿಕ ನಾಶಮಾಡಲು ಬಯಸುತ್ತಾರೆ: ಕಿಂಬರ್ಲಿ ಗಿಲ್ಫಾಯ್ಲ್ - ಅಧ್ಯಕ್ಷೀಯ ಚುನಾವಣೆಯ ಪ್ರಚಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿ ಕಿಂಬರ್ಲಿ ಗಿಲ್ಫಾಯ್ಲ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಭಾಷಣ ಮಾಡಿದ ಅವರು, ಅಮೆರಿಕದ ಮೊದಲ ತಲೆಮಾರಿನ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾರೆ.
ತನ್ನ ತಾಯ್ನಾಡು ಪೋರ್ಟೊ ರಿಕನ್ ಮತ್ತು ಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿದ್ದಾರೆ. ಪೋರ್ಟೊ ರಿಕೊ ಯುಎಸ್ನ ಒಂದು ಪ್ರದೇಶ. ಅಲ್ಲಿರುವ ಜನರು ಅಮೆರಿಕದ ಪ್ರಜೆಗಳಾಗಿದ್ದಾರೆ. ಇನ್ನು ಒಂದು ರಾಷ್ಟ್ರಕ್ಕೆ ಸಮಾಜವಾದಿ ಕಾರ್ಯಸೂಚಿ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಮಾತನಾಡಿರುವ ಅವರು, ಡೆಮಾಕ್ರಟಿಕ್ಸ್ ಪಕ್ಷದವರು ಅಮೆರಿಕವನ್ನ ನಾಶ ಮಾಡಲು ಬಯಸುತ್ತಾರೆ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಜೂನಿಯರ್ ಜೊತೆ ಡೇಟಿಂಗ್ ಮಾಡುತ್ತಿರುವ ಕಿಂಬರ್ಲಿ ಗಿಲ್ಫಾಯ್ಲ್, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಲು ಡೊನಾಲ್ಡ್ ಟ್ರಂಪ್ ಅಣಿಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ಸ್ ಪಕ್ಷದ ಬಿಡೆನ್ ಅವರನ್ನ ಸೋಲಿಸಲು ರಣತಂತ್ರ ಹೆಣೆದಿದ್ದಾರೆ.