ವಾಶಿಂಗ್ಟನ್:ರೂಪಾಂತರಿ ವೈರಸ್ ಡೆಲ್ಟಾ, ಕೋವಿಡ್ ಸೋಂಕು ನಿರ್ಮೂಲನೆ ಮಾಡುವ ಅಮೆರಿಕದ ಪ್ರಯತ್ನಕ್ಕೆ 'ದೊಡ್ಡ ಬೆದರಿಕೆ'ಯಾಗಿದೆ ಎಂದು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಎಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಕೋವಿಡ್ ಸ್ಥಿತಿಗತಿಗಳ ಕುರಿತು ಅವರು ಮಾತನಾಡಿದರು.
ಮೊದಲು ಭಾರತಲ್ಲಿ ಪತ್ತೆಯಾದ ಡೆಲ್ಟಾ ವೈರಸ್, ಈಗ ಯುಎಸ್ನ ಪ್ರತಿದಿನದ ಹೊಸ ಪಾಸಿಟಿವ್ ಕೇಸ್ಗಳ ಪೈಕಿ ಶೇ. 20 ರಷ್ಟು ಪತ್ತೆಯಾಗುತ್ತಿದೆ. ಕಳೆದೆರಡು ವಾರಗಳಲ್ಲಿ ರೂಪಾಂತರಿ ವೈರಸ್ ಶೇ. 10 ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.