ಕರ್ನಾಟಕ

karnataka

ETV Bharat / international

ಲೂಯಿಸ್ ವಿಟಾನ್ ಜಾಗತಿಕ ಕ್ಯಾಂಪೇನ್​​ಗೆ ದೀಪಿಕಾ: ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆ - ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಐಷಾರಾಮಿ ಬ್ರ್ಯಾಂಡ್ ಲೂಯಿಸ್‌ ವಿಟಾನ್​​ನ ಜಾಗತಿಕ ಅಭಿಯಾನದಲ್ಲಿ ಭಾಗವಹಿಸಲಿರುವ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Deepika first Indian star in Louis Vuitton global campaign
ಲೂಹಿ ವಿಟಾನ್ ಜಾಗತಿಕ ಕ್ಯಾಂಪೇನ್​​ಗೆ ದೀಪಿಕಾ

By

Published : Jan 24, 2020, 3:45 PM IST

Updated : Jan 24, 2020, 5:35 PM IST

ಮುಂಬೈ:ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಐಷಾರಾಮಿ ವಸ್ತುಗಳ ಜಾಗತಿಕ ಬ್ರ್ಯಾಂಡ್ ಲೂಯಿಸ್ ವಿಟಾನ್​​ನ ಜಾಗತಿಕ ಅಭಿಯಾನದಲ್ಲಿ ಭಾಗವಹಿಸಲಿರುವ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲೂಯಿಸ್ ವಿಟಾನ್ ಕುಟುಂಬಕ್ಕೆ ಸೇರ್ಪಡೆಗೊಳ್ಳಲು ನನಗೆ ಖುಷಿಯಾಗುತ್ತಿದೆ. ವಿಶ್ವದ ಅತ್ಯಂತ ಐಷಾರಾಮಿ ಬ್ರ್ಯಾಂಡ್‌ಗಾಗಿ ನಿಕೋಲಸ್ ಗೆಸ್ಕ್ವಿಯರ್ ಭೇಟಿಯಾಗುವುದು ರೋಮಾಂಚನಕಾರಿ ವಿಚಾರ ಎಂದು ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಪತಿ, ನಟ ರಣವೀರ್ ಸಿಂಗ್ ದೀಪಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬ್ರ್ಯಾಂಡ್‌ನ 2020ರ ಅಭಿಯಾನಕ್ಕಾಗಿ ಎಮ್ಮಾ ರಾಬರ್ಟ್ಸ್, ಸೋಫಿ ಟರ್ನರ್, ಕ್ಲೋಯ್ ಗ್ರೇಸ್ ಮೊರೆಟ್ಜ್ ಸೇರಿದಂತೆ ಜಾಗತಿಕ ಪ್ರಸಿದ್ಧ ವ್ಯಕ್ತಿಗಳು ದೀಪಿಕಾ ಜೊತೆ ಭಾಗವಹಿಸಲಿದ್ದಾರೆ.

Last Updated : Jan 24, 2020, 5:35 PM IST

ABOUT THE AUTHOR

...view details