ಕರ್ನಾಟಕ

karnataka

ETV Bharat / international

Florida building collapse: ಮೃತರ ಸಂಖ್ಯೆ 78 ಕ್ಕೆ ಏರಿಕೆ - Death toll

ಮಿಯಾಮಿಯಲ್ಲಿ12 ಅಂತಸ್ತಿನ ಕಟ್ಟಡ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 78 ಕ್ಕೆ ಏರಿದೆ. ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

Florida building collapse
Florida building collapse

By

Published : Jul 10, 2021, 2:19 PM IST

ಮಿಯಾಮಿ (ಫ್ಲೋರಿಡಾ): ಸರ್ಫ್‌ಸೈಡ್‌ನಲ್ಲಿ 12 ಅಂತಸ್ತಿನ ವಸತಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮತ್ತೆ 14 ಜನರ ಅವಶೇಷಗಳನ್ನು ಹೊರತೆಗೆಯಲಾಗಿದೆ. ಆ ಮೂಲಕ ಮೃತರ ಸಂಖ್ಯೆ 78 ಕ್ಕೆ ಏರಿದೆ ಎಂದು ಡೇಡ್​​ ಕೌಂಟಿ ಮೇಯರ್ ಡೇನಿಯೆಲ್ಲಾ ಲೆವಿನ್​ ಕಾವಾ ತಿಳಿಸಿದ್ದಾರೆ.

ಜೂನ್ 24 ರಂದು ಮಿಯಾಮಿಯಲ್ಲಿ 12 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿಯಿತು. ಇದರಿಂದಾಗಿ ಹಲವಾರು ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಅಧಿಕಾರಿಗಳು ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿಯೂ ಗಂಭೀರವಾಗಿರುವುದರಿಂದ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.

ಕಟ್ಟಡದ ಕಳಪೆ ಕಾಮಗಾರಿಯೇ ದುರಂತಕ್ಕೆ ಕಾರಣ ಎನ್ನಲಾಗ್ತಿದೆ. ಆದರೆ, ಅಧಿಕಾರಿಗಳು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ:ಸರಯೂ ನದಿಯಲ್ಲಿ ಮುಳುಗಿದ ಕುಟುಂಬ: ಆರು ಮಂದಿ ಜಲಸಮಾಧಿ!

ABOUT THE AUTHOR

...view details