ಕರ್ನಾಟಕ

karnataka

ETV Bharat / international

ವಿಶ್ವಕ್ಕೆ ಕೊರೊನಾ ಸವಾಲು: ಚೀನಾದಲ್ಲಿ ಮರಣ ಮೃದಂಗ! ಸಾವಿನ ಸಂಖ್ಯೆ 213 ಕ್ಕೆ ಏರಿಕೆ - international emergency

ಚೀನಾದಲ್ಲಿ ಕೊರೊನಾ ​ವೈರಸ್​ ಸೋಂಕಿಗೆ ಮೃತಪಟ್ಟವರ ಸಂಖ್ಯೆ 213 ಕ್ಕೆ ಏರಿದ್ದು, 9,692 ಪ್ರಕರಣಗಳು ದೃಢಪಟ್ಟಿದೆ. ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ತೀವ್ರವಾಗುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಇಂದು 'ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ ಮಾಡಿದೆ.

Coronavirus death toll in China rises to 212
ಚೀನಾದಲ್ಲಿ ಸಾವಿನ ಸಂಖ್ಯೆ 212 ಕ್ಕೆ ಏರಿಕೆ

By

Published : Jan 31, 2020, 7:49 AM IST

Updated : Jan 31, 2020, 3:13 PM IST

ಬೀಜಿಂಗ್​​:ಚೀನಾದಲ್ಲಿ ಕೊರೊನಾ ​ವೈರಸ್​ಗೆ ಮೃತಪಟ್ಟವರ ಸಂಖ್ಯೆ 213 ಕ್ಕೆ ಏರಿದ್ದು, 9,692 ಪ್ರಕರಣಗಳು ದೃಢಪಟ್ಟಿರುವುದಾಗಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.

ಹುಬೈ ಪ್ರಾಂತ್ಯದಲ್ಲೇ 204 ಮಂದಿ ಮೃತಪಟ್ಟಿದ್ದು, ಗುರುವಾರ 5,806 ಪ್ರಕರಣಗಳು ದೃಢಪಟ್ಟಿರುವುದಾಗಿ ವರದಿಯಾಗಿದೆ.

ಭಾರತವು ಸೇರಿ 20 ದೇಶಗಳು ಚೀನಾದಿಂದ ಬಂದವರಲ್ಲಿ ವೈರಸ್ ಪತ್ತೆಯಾಗಿರುವುದು ದೃಢಪಟ್ಟಿರುವುದಾಗಿ ವರದಿ ಮಾಡಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ತೀವ್ರವಾಗುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಇಂದು 'ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ ಮಾಡಿದೆ.

ಭಾರತದಲ್ಲಿ ರಾಜಸ್ಥಾನ, ಮಧ್ಯ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳಲ್ಲಿ ಶಂಕಿತ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದವು. ಆದರೆ ಗುರುವಾರ ಕೇರಳದಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದೆ.

Last Updated : Jan 31, 2020, 3:13 PM IST

ABOUT THE AUTHOR

...view details