ಕರ್ನಾಟಕ

karnataka

ETV Bharat / international

'ಇಟಾ' ಚಂಡಮಾರುತಕ್ಕೆ ಗ್ವಾಟೆಮಾಲಾ ತತ್ತರ: ಭೂಕುಸಿತಕ್ಕೆ 50 ಮಂದಿ ಬಲಿ

ಗ್ವಾಟೆಮಾಲಾದಲ್ಲಿ ಇಟಾ ಚಂಡಮಾರುತದ ಅವಾಂತರದಿಂದ ಉಂಟಾದ ಭೂಕುಸಿತದಿಂದಾಗಿ ಮೃತಪಟ್ಟಿರುವವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

Guatemala landslide kills 50 people
'ಇಟಾ' ಚಂಡಮಾರುತಕ್ಕೆ ಗ್ವಾಟೆಮಾಲಾ ತತ್ತರ

By

Published : Nov 6, 2020, 1:46 PM IST

ಮೆಕ್ಸಿಕೋ:ಮಧ್ಯ ಅಮೇರಿಕದ ದೇಶವಾದ ಗ್ವಾಟೆಮಾಲಾದಲ್ಲಿ ಸಂಭವಿಸಿರುವ 'ಇಟಾ' ಚಂಡಮಾರುತ 50 ಜನರನ್ನು ಬಲಿ ಪಡೆದಿದೆ.

ಚಂಡಮಾರುತದ ಅವಾಂತರದಿಂದ ಉಂಟಾದ ಭೂಕುಸಿತದಿಂದಾಗಿ ಇಂದು ಬೆಳಗ್ಗೆ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ವಿಪತ್ತು ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಗ್ವಾಟೆಮಾಲಾದ ಅಧ್ಯಕ್ಷ ಅಲೆಜಾಂಡ್ರೊ ಜಿಯಮ್ಮಟ್ಟೆ ತಿಳಿಸಿದ್ದಾರೆ.

'ಇಟಾ' ಚಂಡಮಾರುತಕ್ಕೆ ಗ್ವಾಟೆಮಾಲಾ ತತ್ತರ

ಮುಂದಿನ 48 ಗಂಟೆಗಳಲ್ಲಿ ದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆಯಾ ಇಲಾಖೆಗಳ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇಟಾ ಚಂಡಮಾರುತ ಪ್ರಸ್ತುತ ಹೊಂಡುರಾಸ್​ಗೆ ಅಪ್ಪಳಿಸಿದ್ದು, ಕೆರಿಬಿಯನ್ ಸಮುದ್ರದ ಕಡೆಗೆ ಸಾಗುತ್ತಿದೆ.

ABOUT THE AUTHOR

...view details