ಕರ್ನಾಟಕ

karnataka

ETV Bharat / international

ಪಾರ್ಟಿ ವೇಳೆ ಗುಂಡಿನ ದಾಳಿ: ಒಬ್ಬನ ಸಾವು, 20 ಮಂದಿಗೆ ಗಾಯ - ಅಮೆರಿಕದಲ್ಲಿ ಗುಂಡಿನ ಚಕಮಕಿ

ಅಮೆರಿಕದಲ್ಲಿ ಭಾನುವಾರ ನಡೆದ ಪಾರ್ಟಿಯೊಂದರಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

DC shooting
ಪಾರ್ಟಿ ವೇಳೆ ಗುಂಡಿನ ದಾಳಿ

By

Published : Aug 10, 2020, 7:44 AM IST

ವಾಷಿಂಗ್ಟನ್(ಅಮೆರಿಕ): ವಾಷಿಂಗ್ಟನ್​ನಲ್ಲಿ ಭಾನುವಾರ ನಡೆಯುತಿದ್ದ ದೊಡ್ಡ ಪಾರ್ಟಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

ಪಾರ್ಟಿ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಲ್ಲಿ ಕ್ರಿಸ್ಟೋಫರ್ ಬ್ರೌನ್ (17) ಮೃತಪಟ್ಟಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಪೀಟರ್ ನ್ಯೂಶಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ. ಕನಿಷ್ಠ ಮೂರು ಮಂದಿ ಶೂಟರ್‌ಗಳು ಘಟನೆಯಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. "ಶೂಟಿಂಗ್‌ನ ಉದ್ದೇಶ ಸ್ಪಷ್ಟವಾಗಿಲ್ಲ. ಸಹ ಅಧಿಕಾರಿಗಳು ಗಾಯಗೊಂಡ ಆಫ್-ಡ್ಯೂಟಿ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು" ಎಂದು ನ್ಯೂಶಮ್ ಹೇಳಿದರು.

ಕೋವಿಡ್ ನಿರ್ಬಂಧದ ನಡುವೆಯೂ ಬೃಹತ್ ಪಾರ್ಟಿ ಆಯೋಜನೆ ಮಾಡಿದ್ದು, ನೂರಾರು ಮಂದಿ ಭಾಗವಹಿಸಿದ್ದರು. ಕೋವಿಡ್-19 ಸಮಯದಲ್ಲಿ ಈ ರೀತಿಯ ಪಾರ್ಟಿಗಳನ್ನು ಆಯೋಜನೆ ಮಾಡುವುದನ್ನು ನಾವು ಸಹಿಸುವುದಿಲ್ಲ ನ್ಯೂಶಮ್ ಎಚ್ಚರಿಕೆ ಸಹ ನೀಡಿದ್ದಾರೆ.

ಇಂತಹ ಪಾರ್ಟಿಗಳನ್ನ ಕೋವಿಡ್​ ಹಿನ್ನೆಲೆ ನಿಷೇಧ ಹೇರಲಾಗಿದೆ. ಆದರೂ ದೊಡ್ಡ ಪಾರ್ಟಿ ಆಯೋಜನೆ ಮಾಡಲಾಗಿದೆ.

ABOUT THE AUTHOR

...view details