ವಾಷಿಂಗ್ಟನ್:ಕ್ಯಾಪಿಟಲ್ ಮೇಲೆ ದಾಳಿ ನಡೆದ ಹಿನ್ನೆಲೆ, ಜೋ ಬೈಡನ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಬೇಕೆಂದು ಆಂತರಿಕ ಸುರಕ್ಷತಾ ಅಧಿಕಾರಿ ಚಾಡ್ ವುಲ್ಫ್ ಗೆ ಕೊಲಂಬಿಯಾ ಮೇಯರ್ ಮುರಿಯಲ್ ಮನವಿ ಮಾಡಿದ್ದಾರೆ.
ಜನವರಿ 20 ರಂದು 59 ನೇ ಅಧ್ಯಕ್ಷೀಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜೋ ಬೈಡನ್, ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗಾಗಿ, ಕ್ಯಾಪಿಟಲ್ನಲ್ಲಿ ಅನುಭವಿಸಿದ ಅವ್ಯವಸ್ಥೆ, ಗದ್ದಲ, ಹಿಂಸಾಚಾರ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಿ ಎಂದು ಅಮೆರಿಕದ ಆಂತರಿಕ ಸುರಕ್ಷತಾ ಅಧಿಕಾರಿ ಚಾಡ್ ವುಲ್ಫ್ ಗೆ ಮುರಿಯಲ್ ಮನವಿ ಮಾಡಿದ್ದಾರೆ.