ಕರ್ನಾಟಕ

karnataka

ETV Bharat / international

ಸಂಪೂರ್ಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಲ್ಯಾಟಿನ್​ ಅಮೆರಿಕದ ಜನತೆ - ಹಲವಾರು ಇತರ ಲ್ಯಾಟಿನ್ ಅಮೆರಿಕನ್ ದೇಶಗಳು

ಚಿಲಿಯ ರಾಜಧಾನಿಯಾದ ಸ್ಯಾಂಟಿಯಾಗೊದಿಂದ ದಕ್ಷಿಣಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಪುಕಾನ್ ಮತ್ತು ಲಾ ಅರೌಕಾನಿಯಾದ ಇತರ ಪ್ರದೇಶಗಳಲ್ಲಿ ಜನರು ಸಂಪೂರ್ಣ ಸೂರ್ಯಗ್ರಹಣ ನೋಡಲು ಸೇರಿದ್ದರು. ಅಲ್ಲದೇ ಈ ರೋಮಾಂಚನಕಾರಿ ದೃಶ್ಯವನ್ನು ನೋಡಿ ಸಂತಸಪಟ್ಟರು.

ಸೂರ್ಯ ಗ್ರಹಣ
ಸೂರ್ಯ ಗ್ರಹಣ

By

Published : Dec 15, 2020, 3:19 PM IST

ಕ್ಯಾರಹೂ (ಲ್ಯಾಟಿನ್​ ಅಮೆರಿಕ): ಸೋಮವಾರ ಸಂಭವಿಸಿದ ಸೂರ್ಯ ಗ್ರಹಣವನ್ನು ಕಣ್ತುಂಬಿಕೊಳ್ಳಲು ಲಾ ಅರೌಕಾನಿಯಾದ ಚಿಲಿಯ ಪ್ರದೇಶದಲ್ಲಿ ಸಾವಿರಾರು ಜನರು ನೆರೆದಿದ್ದರು. ಮೋಡಕವಿದ ವಾತಾವರಣವಿದ್ದ ಕಾರಣ ಅಷ್ಟು ಚೆನ್ನಾಗಿ ಕಾಣದಿದ್ದರೂ, ಅಲ್ಪಸ್ವಲ್ಪ ಕಂಡ ಈ ಅಪರೂಪದ ದೃಶ್ಯವನ್ನು ನೋಡಿ ಜನರು ಸಂತಸಪಟ್ಟರು.

ಚಿಲಿ ರಾಜಧಾನಿಯಾದ ಸ್ಯಾಂಟಿಯಾಗೊದಿಂದ ದಕ್ಷಿಣಕ್ಕೆ 700 ಕಿಲೋಮೀಟರ್ (430 ಮೈಲಿ) ದೂರದಲ್ಲಿರುವ ಪುಕಾನ್ ಮತ್ತು ಲಾ ಅರೌಕಾನಿಯಾದ ಇತರ ಪ್ರದೇಶಗಳಲ್ಲಿ ಜನರು ಸೇರಿದ್ದರು. ಕೋವಿಡ್​​-19 ಹಿನ್ನೆಲೆ ಜನ ಮಾಸ್ಕ್​ ಧರಿಸಿ ಸೂರ್ಯಗ್ರಹಣ ವೀಕ್ಷಿಸಲು ಬಂದಿದ್ದರು.

ಸಂಪೂರ್ಣ ಸೂರ್ಯಗ್ರಹಣ

"ಗ್ರಹಣವನ್ನು ಕೇವಲ ಎರಡು ನಿಮಿಷ ಮಾತ್ರ ನೋಡಲು ಸಾಧ್ಯವಾಯಿತು " ಎಂದು ಡಿಯಾಗೋ ಫ್ಯುಯೆಂಟೆಸ್ ಹೇಳಿದ್ದಾರೆ. ಅವರು ಗ್ರಹಣವನ್ನು ನೋಡಲು ತಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬಂದಿದ್ದರು.

"ನಾನು ಅದನ್ನು ತುಂಬಾ ಇಷ್ಟಪಟ್ಟೆ ಮತ್ತು ಮೋಡಗಳು ಇದ್ದದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಏಕೆಂದರೆ ನಾವು ಅದನ್ನು ಕನ್ನಡಕವಿಲ್ಲದೇ ನೋಡಲು ಸಾಧ್ಯವಾಯಿತು" ಎಂದು ಕ್ಯಾಟಲಿನಾ ಮೊರೇಲ್ಸ್ ಹೇಳಿದರು.

ಓದಿ:ಚೀನಾದ ಟಿಯಾನ್ವೆನ್-1 ಭೂಮಿಯಿಂದ 100 ಮಿಲಿಯನ್ ಕಿ.ಮೀ.ಗಿಂತಲೂ ದೂರ

ಸೂರ್ಯನು ಚಂದ್ರನಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟಾಗ ಅಲ್ಲಿ ನೆರೆದಿದ್ದ ಸಾವಿರಾರು ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಬಳಿಕ ಸೂರ್ಯ ಮತ್ತೆ ಕಾಣಿಸಿಕೊಂಡಾಗ ಜನರು ಮತ್ತೆ ಉತ್ಸಾಹದಿಂದ ಕೂಗಿದರು.

ಇತರ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ, ಆಫ್ರಿಕಾದ ಕೆಲವು ಭಾಗಗಳಲ್ಲಿ ಮತ್ತು ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಾಗರಗಳ ಪ್ರದೇಶಗಳಲ್ಲಿ ಸೂರ್ಯಗ್ರಹಣ ಭಾಗಶಃ ಗೋಚರಿಸಿತು ಎಂದು ತಜ್ಞರು ಹೇಳಿದ್ದಾರೆ. ಚಿಲಿಯಲ್ಲಿ ಮುಂದೆ ಈ ರೀತಿಯ ಸೂರ್ಯಗ್ರಹಣವು 28 ವರ್ಷಗಳ ಬಳಿಕ ಸಂಭವಿಸಲಿದೆ. ಇನ್ನೊಂದು ಗ್ರಹಣ 2021 ರ ಅಂತ್ಯದ ವೇಳೆಗೆ ಅಂಟಾರ್ಕ್ಟಿಕಾದಲ್ಲಿ ಗೋಚರಿಸುವ ನಿರೀಕ್ಷೆಯಿದೆ.

ABOUT THE AUTHOR

...view details