ಕರ್ನಾಟಕ

karnataka

ETV Bharat / international

'51 ವರ್ಷದ ಅತ್ತೆಗೆ ಗುತ್ತಿಗೆ ಆಧಾರದಲ್ಲಿ ಬಾಯ್‌ಫ್ರೆಂಡ್‌ ಬೇಕಾಗಿದ್ದಾರೆ' Conditions apply! - ಅತ್ತೆಗೆ ಬಾಯ್​​ಫ್ರೆಂಡ್ ಬೇಕೆಂದು ಜಾಹಿರಾತು

ಅಮೆರಿಕದ ಕ್ಲಾಸಿಫೈಡ್ ಜಾಹೀರಾತುಗಳ ವೆಬ್‌ಸೈಟ್‌ನ ಕ್ರೇಗ್ಸ್‌ಲಿಸ್ಟ್‌ನಲ್ಲಿ ವೈರಲ್ ಆದ ಜಾಹೀರಾತಿನಲ್ಲಿ, ನ್ಯೂಯಾರ್ಕ್​ನ ಹಡ್ಸನ್​ ನಿವಾಸಿಯಾದ ಮಹಿಳೆ ತನ್ನ 51 ವರ್ಷ ಪ್ರಾಯದ ಅತ್ತೆಗೆ ಬಾಯ್​ಫ್ರೆಂಡ್​ ಬೇಕು ಎಂದು ಜಾಹೀರಾತು ನೀಡಿದ್ದಾಳೆ.

ಅತ್ತೆಗೆ ಗುತ್ತಿಗೆ ಆಧಾರದಲ್ಲಿ ಬಾಯ್‌ಫ್ರೆಂಡ್‌ ಬೇಕಾಗಿದ್ದಾರೆ
ಅತ್ತೆಗೆ ಗುತ್ತಿಗೆ ಆಧಾರದಲ್ಲಿ ಬಾಯ್‌ಫ್ರೆಂಡ್‌ ಬೇಕಾಗಿದ್ದಾರೆ

By

Published : Jul 20, 2021, 10:35 PM IST

Updated : Jul 20, 2021, 10:41 PM IST

ನ್ಯೂಯಾರ್ಕ್​: ವಧು-ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಸೊಸೆ ತನ್ನ ಅತ್ತೆಗಾಗಿ ಬಾಯ್​ಫ್ರೆಂಡ್​ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾಳೆ.

ಅಮೆರಿಕದ ಕ್ಲಾಸಿಫೈಡ್ ಜಾಹೀರಾತುಗಳ ವೆಬ್‌ಸೈಟ್‌ನ ಕ್ರೇಗ್ಸ್‌ಲಿಸ್ಟ್‌ನಲ್ಲಿ ವೈರಲ್ ಆದ ಜಾಹೀರಾತಿನಲ್ಲಿ ನ್ಯೂಯಾರ್ಕ್​ನ ಹಡ್ಸನ್​ ನಿವಾಸಿಯಾದ ಮಹಿಳೆ ತನ್ನ 51 ವರ್ಷ ಪ್ರಾಯದ ಅತ್ತೆಗೀಗೆ ಬಾಯ್​ಫ್ರೆಂಡ್​ ಬೇಕು ಎಂದು ಜಾಹೀರಾತು ನೀಡಿದ್ದಾಳೆ.

ಮಾವ ಇಲ್ಲದೇ ಇರುವ ಕಾರಣ ಅವರಿಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾನೆ. ನಾವು 40-60 ವರ್ಷ ಪ್ರಾಯದ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಗುತ್ತಿಗೆ ಆಧಾರದ ಮೇಲೆ ಬಾಯ್​ಫ್ರೆಂಡ್​ ಬೇಕು. ಆಯ್ಕೆಯಾದ ವ್ಯಕ್ತಿಗೆ 72,000 ರೂ. ನೀಡಲಾಗುವುದು ಎಂದು ಜಾಹೀರಾತು ನೀಡಿದ್ದಾಳೆ. ಅಷ್ಟಕ್ಕೂ ಈ ಬಾಯ್​ಫ್ರೆಂಡ್ ಬೇಕಾಗಿರುವುದು ಕೇವಲ ಎರಡು ದಿನ ಮಾತ್ರ, ಅದೂ ಕೂಡಾ ಮದುವೆಗೆ ಹೋಗಲಷ್ಟೇ ಎಂದು ತಿಳಿಸಿದ್ದಾಳೆ.

ಬಾಯ್​ಫ್ರೆಂಡ್​ ಆಗಬಯಸುವ ವ್ಯಕ್ತಿಗೆ ಡ್ಯಾನ್ಸ್​​ ಗೊತ್ತಿರಬೇಕು, ಆತ ಉತ್ತಮ ವಾಕ್‌ಚಾತುರ್ಯ ಹೊಂದಿರಬೇಕು ಎಂದೂ ಕಂಡೀಷನ್​ ಹಾಕಿದ್ದಾಳೆ. ಅನೇಕರು ಇದು ಸೋಶಿಯಲ್​ ಮೀಡಿಯಾದಲ್ಲಿ ಪ್ರಚಾರಕ್ಕಾಗಿ ಮಹಿಳೆ ಈ ರೀತಿಯ ಜಾಹೀರಾತು ನೀಡಿದ್ದಾಳೆ ಎಂದು ಸೋಶಿಯಲ್​ ಮಿಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಏನೇ ಆಗಲಿ ಇದೊಂದು ಅಚ್ಚರಿಯ ಜಾಹೀರಾತು ಎನ್ನುವುದರಲ್ಲಿ ಸಂಶಯವಿಲ್ಲ.

Last Updated : Jul 20, 2021, 10:41 PM IST

For All Latest Updates

TAGGED:

ABOUT THE AUTHOR

...view details