ವಾಷಿಂಗ್ಟನ್: ಈ ಹಿಂದೆ ಅಮೆರಿಕ ಕೋವಿಡ್ ಸಂಕಷ್ಟಕ್ಕೊಳಗಾಗಿದ್ದ ವೇಳೆ ಭಾರತ ನಮಗೆ ಅಗತ್ಯ ನೆರವು ರವಾನೆ ಮಾಡಿತ್ತು. ಇದೀಗ ತೊಂದರೆಗೊಳಗಾಗಿರುವ ಭಾರತಕ್ಕೆ ಅಗತ್ಯ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ.
ಭಾರತದ ಸ್ನೇಹಿತರಾಗಿ, ಏಷ್ಯನ್ ಕ್ವಾಡ್ ಸದಸ್ಯರಾಗಿ ಮತ್ತು ಜಾಗತಿಕ ಸಮುದಾಯದ ಭಾಗವಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸುವ ಉದ್ದೇಶದಿಂದ ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್ ಅಮಾನತುಗೊಳಿಸಲಾಗಿದ್ದು, ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಚುಚ್ಚುಮದ್ದು ನೀಡಲು ಸಹಾಯ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.