ವಾಷಿಂಗ್ಟನ್: ಭಾರತಕ್ಕೆ ಪೂರೈಕೆಯಾಗಬೇಕಿದ್ದ ಅಗತ್ಯ ವೈದ್ಯಕೀಯ ಸಾಮಗ್ರಿ ತುಂಬಿದ ಯುಎಸ್ ವಾಯುಪಡೆಯ ವಿಮಾನಗಳು ನಿರ್ವಹಣೆ ಸಮಸ್ಯೆಗಳಿಂದಾಗಿ ಬುಧವಾರದವರೆಗೆ ವಿಳಂಬವಾಗಲಿದೆ.
ನಿರ್ವಹಣೆ ಸಮಸ್ಯೆ: ಅಮೆರಿಕದಿಂದ ವೈದ್ಯಕೀಯ ಸಾಮಗ್ರಿ ಪೂರೈಕೆ ವಿಳಂಬ - ಅಂತಾರಾಷ್ಟ್ರೀಯ ವೈದ್ಯಕೀಯ ಸಹಾಯ
ಭಾರತಕ್ಕೆ ಅಗತ್ಯ ವೈದ್ಯಕೀಯ ಸಾಮಗ್ರಿ ತುಂಬಿದ ಅಮೆರಿಕ ವಾಯುಪಡೆಯ ವಿಮಾನಗಳು ನಿರ್ವಹಣೆ ಸಮಸ್ಯೆಗಳಿಂದಾಗಿ ಬುಧವಾರದವರೆಗೆ ವಿಳಂಬವಾಗಲಿದೆ.
ಯುಎಸ್ ಟ್ರಾನ್ಸ್ಕಾಂನಿಂದ ಭಾರತಕ್ಕೆ ಆಗಮಿಸುವ ಈ ವಿಮಾನಗಳು ನಿರ್ವಹಣಾ ಸಮಸ್ಯೆಗಳಿಂದಾಗಿ ಕನಿಷ್ಠ ಬುಧವಾರದವರೆಗೆ ವಿಳಂಬವಾಗಲಿದೆ ಎಂದು ಪೆಂಟಗನ್ ವಕ್ತಾರರು ಮಾಹಿತಿ ನೀಡಿದ್ದಾರೆ. ಮೂರು ಏರ್ ಫೋರ್ಸ್ ಸಿ -5 ಸೂಪರ್ ಗ್ಯಾಲಕ್ಸಿಗಳು ಮತ್ತು ಒಂದು ಸಿ -17 ಗ್ಲೋಬ್ ಮಾಸ್ಟರ್ ಸೋಮವಾರ ಭಾರತಕ್ಕೆ ತೆರಳಬೇಕಿತ್ತು. ನಿರ್ದಿಷ್ಟವಾಗಿ ಜೀವ ಉಳಿಸುವ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳು ಅಗತ್ಯವಾಗಿ ಭಾರತಕ್ಕೆ ಬೇಕಾಗಿದೆ.
ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಮೆರಿಕ ಭಾರತದ ಸಹಾಯಕ್ಕೆ ಆರೋಗ್ಯ ರಕ್ಷಣೆ ಸಾಮಗ್ರಿ ಕಳುಹಿಸುವ ಪ್ರಕ್ರಿಯೆ ಮುಂದುವರಿಸಲಿದೆ. ಆದರೆ ನಿರ್ವಹಣಾ ಸಮಸ್ಯೆಯಿಂದ ವಿಳಂಬವಾಗಿದೆಯಷ್ಟೇ" ಎಂದು ಹೇಳಿದ್ದಾರೆ.