ವಾಷಿಂಗ್ಟನ್: ಕೊರೊನಾ ಅಟ್ಟಹಾಸಕ್ಕೆ ಜಗತ್ತಿನಾದ್ಯಂತ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈವರೆಗೆ ಜಗತ್ತಿನಾದ್ಯಂತ 4,13,761 ಜನ ಮಾರಕ ಸೋಂಕಿಗೆ ಬಲಿಯಾಗಿದ್ದು, 73 ಲಕ್ಷ ಜನ ಸೋಂಕಿಗೊಳಗಾಗಿದ್ದಾರೆ.
ಜಾಗತಿಕವಾಗಿ ಈವರೆಗೆ 73,25,839 ಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿದ್ದು, ಇದರಲ್ಲಿ 36,06,090 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 33,05,988 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಅಮೆರಿಕದಲ್ಲಿ ಒಟ್ಟು ಸಾವಿನ ಸಂಖ್ಯೆ 1,14,151ಕ್ಕೇರಿದ್ದು, ಹೆಚ್ಚು ಜನ ಸಾವನ್ನಪ್ಪಿದ ರಾಷ್ಟ್ರ ಅಮೆರಿಕವಾಗಿದೆ. ಅಲ್ಲದೆ 20,45,715 ಜನರನ್ನು ಸೋಂಕು ಬಾಧಿಸಿದೆ. ಬ್ರಿಟನ್ನಲ್ಲಿ 40,883 ಜನ ಸಾವನ್ನಪ್ಪಿದ್ದರೆ, 2,89,140 ಜನರಿಗೆ ಸೋಂಕು ಅಂಟಿಕೊಂಡಿದೆ. ಬ್ರೆಜಿಲ್ನಲ್ಲಿ 7,42,084 ಸೋಂಕಿತ ಪ್ರಕರಣ ವರದಿಯಾಗಿದ್ದು, ಈವರೆಗೆ 38,497 ಜನ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿತರ ಪಟ್ಟಿಯಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದ್ದು, 4,85,253 ಪ್ರಕರಣಗಳು ವರದಿಯಾಗಿವೆ.
ಇನ್ನೊಂದೆಡೆ ಚೀನಾದಲ್ಲಿ ಮೂರು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂರೂ ಸೋಂಕಿತರು ವಿದೇಶದಿಂದ ಬಂದವರು ಎಂದು ಚೀನಾ ಹೇಳಿದೆ. ಬುಧವಾರ ಯಾವುದೇ ಹೊಸ ಸಾವು ವರದಿಯಾಗಿಲ್ಲ. ಸದ್ಯ ಕೇವಲ 55 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಚೀನಾ ತಿಳಿಸಿದೆ.