ಕರ್ನಾಟಕ

karnataka

ETV Bharat / international

ಭಾರತಕ್ಕೆ ಕೋವಿಡ್ ಲಸಿಕೆಯ ಕಚ್ಚಾ ವಸ್ತುಗಳ ರಫ್ತು ನಿಷೇಧ ಕುರಿತು ತುಟಿ ಬಿಚ್ಚದ ಅಮೆರಿಕ - ಭಾರತಕ್ಕೆ ಕೋವಿಡ್ ಲಸಿಕೆಯ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧ ಕುರಿತು ಪ್ರತಿಕ್ರಿಯಿಸದ ಶ್ವೇತಭವನ

ಕೋವಿಡ್​-19 ಕುರಿತು ಶ್ವೇತಭವನದ ಬ್ರೀಫಿಂಗ್ ಸಮಯದಲ್ಲಿ ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಬೇಕಾದ ಕೆಲವು ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕುವಂತೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮಾಡಿದ ಮನವಿಗೆ ಪ್ರತಿಕ್ರಿಯಿಸಿಲ್ಲ.

WH refuses to comment on lifting ban on vaccine raw materials export to India
ಕೋವಿಡ್ ಲಸಿಕೆಯ ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧ ಕುರಿತು ಪ್ರತಿಕ್ರಿಯಿಸದ ಶ್ವೇತಭವನ

By

Published : Apr 20, 2021, 10:55 AM IST

ವಾಷಿಂಗ್ಟನ್(ಯುಎಸ್): ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಬೇಕಾದ ಕೆಲವು ಕಚ್ಚಾ ವಸ್ತುಗಳ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕುವಂತೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮಾಡಿದ ಮನವಿಗೆ ಶ್ವೇತಭವನ ಸೋಮವಾರ ಪ್ರತಿಕ್ರಿಯಿಸಿಲ್ಲ.

ಸೋಮವಾರ ಬೆಳಿಗ್ಗೆ ಒಮ್ಮೆ ಕೋವಿಡ್​-19 ಕುರಿತು ಶ್ವೇತಭವನದ ಬ್ರೀಫಿಂಗ್ ಸಮಯದಲ್ಲಿ ಮತ್ತು ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರ ದೈನಂದಿನ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಕುರಿತು ಎರಡು ಬಾರಿ ಪ್ರಶ್ನೆಯನ್ನು ಕೇಳಲಾಯಿತು.

ಇದನ್ನೂ ಓದಿ:'ಲಸಿಕೆ ಹಾಕಿಸಿಕೊಳ್ಳದೇ ಭಾರತಕ್ಕೆ ಪ್ರಯಾಣ ಬೆಳೆಸದಿರಿ': ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ

ಕೊರೊನಾ ಲಸಿಕೆಗಳನ್ನು ತಯಾರಿಸಲು ಅಗತ್ಯವಿರುವ ಕಚ್ಚಾ ವಸ್ತುಗಳ ರಫ್ತನ್ನು ಬೈಡನ್ ಆಡಳಿತವು ನಿರ್ಬಂಧಿಸುತ್ತಿದೆ ಎಂದು ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳುತ್ತಿದೆ. ಆ ನಿರ್ಬಂಧವನ್ನು ತೆಗೆದುಹಾಕುವಂತೆ ಅಧ್ಯಕ್ಷ ಬೈಡೆನ್ ಅವರನ್ನ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಒತ್ತಾಯಿಸಿದೆ. ಹಾಗಾಗಿ ಇಲ್ಲಿ ಯಾವ ಕಚ್ಚಾ ವಸ್ತುಗಳು ಸಮಸ್ಯೆಯಲ್ಲಿವೆ ಎಂದು ಕೇಳಲು ನಾನು ಬಯಸುತ್ತೇನೆ?, ಸೀರಮ್‌ನ ಕಳವಳಗಳನ್ನು ಪರಿಹರಿಸಲು ನೀವು ಯಾವುದೇ ಯೋಜನೆಯನ್ನು ಹೊಂದಿದ್ದೀರಾ? ಎಂದು ಶ್ವೇತಭವನದ ಕೊರೊನಾ ಪ್ರತಿಕ್ರಿಯೆ ತಂಡಕ್ಕೆ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ವರದಿಗಾರರು ಕೇಳಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನಿರ್ದೇಶಕ ಡಾ. ಆಂಥೋನಿ ಫೌಸಿ ಮತ್ತು ಶ್ವೇತಭವನದ ಕೊರೊನಾ ಪ್ರತಿಕ್ರಿಯೆಯ ಹಿರಿಯ ಸಲಹೆಗಾರ ಡಾ.ಆಂಡಿ ಸ್ಲಾಸಿಟ್ ಇಬ್ಬರೂ ತಮ್ಮ ಬಳಿ ಉತ್ತರವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಅಮೆರಿಕದ ಮಾಜಿ ಉಪಾಧ್ಯಕ್ಷ ವಾಲ್ಟರ್ ಮೊಂಡೇಲ್ ನಿಧನ

For All Latest Updates

ABOUT THE AUTHOR

...view details