ವಾಷಿಂಗ್ಟನ್ (ಅಮೆರಿಕ):ಅಮೆರಿಕ ಜನತೆಯು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ ಎಂದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದಲ್ಲದೆ ಕೊರೊನಾ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಹಾಗೂ ಸುರಕ್ಷತೆಯ ಬಗ್ಗೆ ಅನುಮಾನವಿಲ್ಲದಾಗ ಅವರು ಲಸಿಕೆ ಪಡೆದುಕೊಳ್ಳಬಹುದು ಎಂದಿದ್ದಾರೆ.
ಮಾಸ್ಕ್‌ನ ದೇಶದಾದ್ಯಂತ ಕಡ್ಡಾಯ ಮಾಡದ ಆದೇಶದಂತೆಯೇ ಲಸಿಕೆಯು ಸಹ ಕಡ್ಡಾಯ ಅಂತೇನೂ ಹೇಳಲಾಗದು. ಲಸಿಕೆ ಕಡ್ಡಾಯ ಎಂದು ನಾನು ಒತ್ತಾಯಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದ್ದಾರೆ.
ಅಲ್ಲದೆ ಜನವರಿ 20ರಿಂದ ಅಧ್ಯಕ್ಷರಾಗಿ ಅಧಿಕೃತವಾಗಿ ಶ್ವೇತಭವನಕ್ಕೆ ಕಾಲಿಡಲಿರುವ ಅವರು, ಕೊರೊನಾ ಲಸಿಕೆ ಉಚಿತವಾಗಿರಲಿದೆ, ಅದರಿಂದ ಉಂಟಾಗುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗೂ ಲಸಿಕೆ ಉಚಿತವಾಗಿರಲಿದೆ ಎಂದು ಈಗಾಗಲೇ ತಿಳಿಸಿದ್ದಾರೆ.