ಬೋಸ್ಟನ್ (ಯುಎಸ್ಎ): ಕೊರೊನಾ ವೈರಸ್ನಿಂದಾಗಿ ವಿಶ್ವದೆಲ್ಲೆಡೆ ಆತಂಕ ಉಂಟಾಗಿದ್ದು, ಕೊರೊನಾ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಉಂಟಾದಾಗ ವೆಂಟಿಲೇಟರ್ ಮೊರೆ ಹೋಗುವುದು ಅತ್ಯಂತ ಅವಶ್ಯವಾಗಿದೆ. ಆದರೆ, ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ವೆಂಟಿಲೇಟರ್‌ಗಳನ್ನು ಒದಗಿಸುವುದು ಕಷ್ಟಕರವಾಗಿದೆ.
ಈ ನಿಟ್ಟಿನಲ್ಲಿ ಭಾರತೀಯ ಮೂಲದವರನ್ನ ಒಳಗೊಂಡಂತೆ ಸಂಶೋಧಕರ ತಂಡವೊಂದು ಅಮೆರಿಕದಲ್ಲಿ ರೋಗಿಗಳ ನಡುವೆ ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳುವ ಹೊಸ ವಿಧಾನವನ್ನು ಕಂಡು ಹಿಡಿದಿದ್ದಾರೆ. ಇದನ್ನು ತೀವ್ರ ಉಸಿರಾಟದ ತೊಂದರೆಯಲ್ಲಿರುವ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊನೆಯ ಅಸ್ತ್ರವಾಗಿ ಬಳಸಬಹುದು ಎಂದು ಹೇಳಿದ್ದಾರೆ.
ಅಮೆರಿಕದ ಮೆಸಾಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿನ ಶ್ರಿಯಾ ಶ್ರೀನಿವಾಸನ್ ಸೇರಿದಂತೆ ಹಲವು ಸಂಶೋಧಕರು, ಕೊರೊನಾ ರೋಗಿಗಳು ತೀವ್ರವಾದ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿರುವುದರಿಂದ, ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳುವ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.