ವಾಷಿಂಗ್ಟನ್: ಭಾರತದಲ್ಲಿ ಪತ್ತೆಯಾಗಿದ್ದ ಡೆಲ್ಟಾ ಕೋವಿಡ್ ರೂಪಾಂತರಿ ವೈರಸ್ ತಳಿ ಈಗ ವಿಶ್ವವ್ಯಾಪಿಯಾಗಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ದೇಶದ ಪ್ರಜೆಗಳಿಗೆ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ತುಂಬಾ ದೊಡ್ಡ ಪ್ರಮಾಣದಲ್ಲಿ ಅದರಲ್ಲೂ ಯುವ ಜನತೆಗೆ ಮಾರಕ ಡೆಲ್ಟಾ ರೂಪಾಂತರಿ ಕೋವಿಡ್ ವೈರಸ್ ಭೀತಿ ಎದುರಾಗಿರುವುದರಿಂದ ಅಮೆರಿಕದ ಎಲ್ಲಾ ಪ್ರಜೆಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದಾರೆ.
ವೈಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೊಂದು ತಿಂಗಳಿನಿಂದ ಲಸಿಕೆ ಪಡೆಯದವರನ್ನು ಹೊಸ ರೂಪಾಂತರಿ ಕಾಡುತ್ತಿದೆ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಡೆಲ್ಟಾ ವೈರಸ್ ಅತಿ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ವಿಶೇಷವಾಗಿ ಯುವ ಜನತೆಗೆ ಹೆಚ್ಚು ಮಾರಕವಾಗಿರುವುದಾಗಿ ತಜ್ಞರು ತಿಳಿಸಿದ್ದಾರೆ ಎಂದರು.