ವಾಷಿಂಗ್ಟನ್ :ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಸೆಪ್ಟೆಂಬರ್ 29ರಂದು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಅಧ್ಯಕ್ಷೀಯ ಸಂವಾದಲ್ಲಿ ಪ್ರಮುಖ ಆರು ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ನಾನ್ ಪಾರ್ಟಿಷಿಯನ್ ಕಮಿಷನ್ ಹೇಳಿದೆ.
ಕ್ಲೆವೆಲ್ಯಾಂಡ್‌ನಲ್ಲಿ ನಡೆಯಲಿರುವ ಈ ಮುಖಾಮುಖಿ ಸಮರದಲ್ಲಿನ ಆರು ವಿಷಯಗಳನ್ನು ಫಾಕ್ಸ್ ನ್ಯೂಸ್‌ನ ಕ್ರಿಸ್ ವಾಲಸ್ ಅವರು ಆಯ್ಕೆ ಮಾಡಿದ್ದಾರೆ. ಪ್ರತಿ ವಿಷಯಕ್ಕೆ 15 ನಿಮಿಷಗಳನ್ನು ನಿಗದಿ ಮಾಡಲಾಗಿದೆ.