ನ್ಯೂಯಾರ್ಕ್: ಕೊರೊನಾ ವೈರಸ್ ಪ್ರಪಂಚದಾದ್ಯಂತ ಹರಿದಾಡುತ್ತಿದೆ. ಲಾಕ್‌ಡೌನ್ ವೇಳೆ ಚಟುವಟಿಕೆ ಇಲ್ಲದೆ ಮನೆಯಲ್ಲಿ ಕಾಲ ಕಳೆಯುತ್ತಿರುವ ಮಕ್ಕಳಲ್ಲಿ ಬೊಜ್ಜು ಏರಿಕೆ ಆಗುತ್ತಿದೆ. ಇದು ಆಹಾರ, ನಿದ್ರೆ ಮತ್ತು ದೈಹಿಕ ಚಟುವಟಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನ ತಂಡ ಎಚ್ಚರಿಸಿದೆ. ಕೋವಿಡ್-19 ಸಾಂಕ್ರಾಮಿಕವು ವೈರಲ್ ಸೋಂಕು ಮೀರಿ ಬದಲಿ ಮೇಲಾಧಾರ ಪರಿಣಾಮಗಳನ್ನು ಹೊಂದಿದೆ ಎಂದು ಅಮೆರಿಕದ ಬಫಲೋ ವಿಶ್ವವಿದ್ಯಾಲಯದ ಅಧ್ಯಯನ ಸಹ ಲೇಖಕ ಮೈಲೆಸ್ ಫೇಯ್ತ್ ಹೇಳಿದ್ದಾರೆ.
ಸ್ಥೂಲಕಾಯ ಸಮಸ್ಯೆ ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರನ್ನು ದುರದೃಷ್ಟಕರ ಎಂಬಂತೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಇದು ಆರೋಗ್ಯಕರ ಜೀವನಶೈಲಿ ನಡವಳಿಕೆಗಳನ್ನು ಕಾಪಾಡಿಕೊಳ್ಳಲು ಪ್ರತಿಕೂಲವಾದ ವಾತಾವರಣ ಸೃಷ್ಟಿಸುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದಾರೆ ಎಂದರು. ಮಕ್ಕಳು ಮತ್ತು ಹದಿಹರೆಯದವರು ಸಾಮಾನ್ಯವಾಗಿ ಶೈಕ್ಷಣಿಕ ಅವಧಿಗಿಂತ ಬೇಸಿಗೆ ರಜೆಯಲ್ಲಿ ಹೆಚ್ಚಿನ ತೂಕ ಪಡೆಯುತ್ತಾರೆ. ಇದು ಹೋಮ್‌ಬೌಂಡ್ ಆಗಿರುವುದರಿಂದ ಮಕ್ಕಳ ಜೀವನಶೈಲಿಯ ನಡವಳಿಕೆಗಳ ಮೇಲೆ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಬೆಸಿಟಿ ಜರ್ನಲ್ ಪ್ರಕಟಣೆಯ ಅನ್ವಯ, ಸಂಶೋಧಕರು 41 ಮಕ್ಕಳು ಮತ್ತು ಹದಿಹರೆಯದವರನ್ನು ಸ್ಥೂಲಕಾಯದ ಜೊತೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಾಂತ್ಯಕ್ಕೂ ಇಟಲಿಯ ವೆರೋನಾದಲ್ಲಿ ಸಮೀಕ್ಷೆ ನಡೆಸಿದರು. ಆಹಾರ, ಚಟುವಟಿಕೆ ಮತ್ತು ನಿದ್ರೆಗೆ ಸಂಬಂಧಿಸಿದ ಜೀವನಶೈಲಿಯ ಮಾಹಿತಿಯನ್ನು ಇಟಲಿಯ ರಾಷ್ಟ್ರೀಯ ಲಾಕ್ಡೌನ್ನ ಮೂರು ವಾರಗಳವರೆಗೆ ಸಂಗ್ರಹಿಸಲಾಯಿತು. ಈ ಡಾಟಾವನ್ನು 2019ರಲ್ಲಿ ಸಂಗ್ರಹಿಸಿದ್ದ ಮಕ್ಕಳ ದತ್ತಾಂಶಕ್ಕೆ ಹೋಲಿಕೆ ಮಾಡಲಾಯಿತು.