ಕರ್ನಾಟಕ

karnataka

ETV Bharat / international

5 ಲಕ್ಷ ದಾಟಿತು ಕೊರೊನಾ ಸೋಂಕಿತರ ಸಂಖ್ಯೆ: ಮಾರಕ ರೋಗದ ಕೇಂದ್ರವಾಗ್ತಿದೆ ಅಮೆರಿಕ

ನಾಲ್ಕು ತಿಂಗಳ ಹಿಂದೆ ಚೀನಾದ ಒಂದು ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಪಿಡುಗು ಇಂದು ಪ್ರಪಂಚದ ಅರ್ಧ ಮಿಲಿಯನ್​​ಗೂ ಅಧಿಕ ಮಂದಿಗೆ ತಗುಲಿದೆ. ಸದ್ಯ ಅಮೆರಿಕದಲ್ಲಿ ವಿಶ್ವದಲ್ಲೇ ಅಧಿಕ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

corona death death toll crosses half a million mark
ಅಮೆರಿಕದಲ್ಲೆ ಹೆಚ್ಚು ಸೊಂಕಿತರು

By

Published : Mar 27, 2020, 9:56 AM IST

ಹೈದರಾಬಾದ್:ಕಳೆದ ವರ್ಷ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು ಇಂದು ಇಡೀ ಜಗತ್ತಿನಾದ್ಯಂತ ಆವರಿಸಿದ್ದು 5 ಲಕ್ಷಕ್ಕೂ ಅಧಿಕ ಮಂದಿ ಈ ಮಾರಕ ಸೋಂಕಿನಿಂದ ಬಳಲುತ್ತಿದ್ದಾರೆ.

ಮೊದಲು ಚೀನಾದಲ್ಲಿ ಕಾಣಿಸಿಕೊಂಡಿದ್ದ ವೈರಾಣು ಇದೀಗ ಯುರೋಪ್ ರಾಷ್ಟ್ರಗಳನ್ನು ಹೆಚ್ಚೆಚ್ಚು ಬಾಧಿಸುತ್ತಿದೆ. ಇಡೀ ವಿಶ್ವದಲ್ಲಿ ಇಲ್ಲಿಯವರೆಗೆ 5 ಲಕ್ಷದ 31 ಸಾವಿರದ 800 ಜನ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ. 24 ಸಾವಿರದ 71 ಜನರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೊನಾ ಕೇಂದ್ರವಾಗುತ್ತಿದೆ ಅಮೆರಿಕ:

ಇತ್ತ ಫೆಬ್ರವರಿ ಅಂತ್ಯದಲ್ಲಿ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಓರ್ವ ವ್ಯಕ್ತಿ ಸಾವಿಗೀಡಾಗಿದ್ದ. ನಂತರ ವ್ಯಾಪಕವಾಗಿ ಹರಡಿದ ಸೋಂಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಾ ಸಾಗುತ್ತಿದೆ. ಅಮೆರಿಕದ ಒಂದೇ ದೇಶಧಲ್ಲಿ 82 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಜಾನ್ ಹಾಪ್​ಕಿನ್ಸ್​ ವಿಶ್ವವಿದ್ಯಾಲಯ ತಿಳಿಸಿದೆ.

ಚೀನಾದಲ್ಲಿ 81,700 ಮತ್ತು ಇಟಲಿಯಲ್ಲಿ 80,500 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಎರಡೂ ದೇಶಗಳಿಗಿಂತ ಅಮೆರಿಕದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿಯತನಕ ನಾನಾ ಕಡೆಗಳಲ್ಲಿ 1 ಲಕ್ಷದ 20 ಸಾವಿರ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇಂಗ್ಲೆಂಡ್‌ನಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಸಾವು:

ಇಂಗ್ಲೆಂಡ್​ನಲ್ಲಿ ಗುರುವಾರ ಮೊದಲ ಬಾರಿಗೆ 24 ಗಂಟೆಗಳ ಅವಧಿಯಲ್ಲಿ 100 ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ. ಒಂದೇ ದಿನದಲ್ಲಿ 115 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details