ಕರ್ನಾಟಕ

karnataka

ETV Bharat / international

ಕ್ಯಾಪಿಟಲ್ ಗಲಭೆ ತನಿಖೆಗೆ ಸಹಕರಿಸುವಂತೆ ಇವಾಂಕಾ ಟ್ರಂಪ್​ಗೆ ಪತ್ರ - committee seeks interview with Ivanka Trump

ಜನವರಿ 6, 2021 ರ ಕ್ಯಾಪಿಟಲ್ ಹಿಲ್ ಘಟನೆಗೆ ಸಂಬಂಧಿಸಿದ ತನಿಖೆಗೆ ಸಹಕರಿಸುವಂತೆ ಇವಾಂಕಾ ಟ್ರಂಪ್​ಗೆ ಪತ್ರ ಬರೆಯುವ ಮೂಲಕ ಸದನ ಸಮಿತಿ ಸದಸ್ಯರು ಕೇಳಿಕೊಂಡಿದ್ದಾರೆ.

ಇವಾಂಕಾ ಟ್ರಂಪ್​
ಇವಾಂಕಾ ಟ್ರಂಪ್​

By

Published : Jan 21, 2022, 7:27 AM IST

ವಾಷಿಂಗ್ಟನ್: ಕ್ಯಾಪಿಟಲ್ ಗಲಭೆ ಕುರಿತು ತನಿಖೆ ನಡೆಸುತ್ತಿರುವ ಸದನ ಸಮಿತಿಯು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಶ್ವೇತಭವನದ ಮಾಜಿ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅವರು ತನಿಖೆಗೆ ಸ್ವಯಂಪ್ರೇರಣೆಯಿಂದ ಸಹಕರಿಸುವಂತೆ ಕೇಳಿಕೊಂಡಿದೆ.

ಕ್ಯಾಪಿಟಲ್ ಕಟ್ಟಡದಲ್ಲಿ ಜನವರಿ 6ರಂದು ನಡೆದ ಘಟನೆಯ ಸಂಗತಿಗಳು, ಸಂದರ್ಭಗಳು ಮತ್ತು ಕಾರಣಗಳನ್ನು ಸಮಿತಿಯು ತನಿಖೆ ಮಾಡಿ ವರದಿ ಮಾಡುತ್ತಿದೆ. ಇದಲ್ಲದೇ, ಅಮೆರಿಕ ಕ್ಯಾಪಿಟಲ್ ಪೊಲೀಸ್ ಮತ್ತು ಇತರ ಫೆಡರಲ್​​​​​ ಸಂಸ್ಥೆಗಳು ಈ ಬಗ್ಗೆ ತನಿಖೆ ಮಾಡುತ್ತಿವೆ.

ಜಾಹಿರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜನವರಿ 6, 2021 ರ ಕ್ಯಾಪಿಟಲ್ ಹಿಲ್ ಘಟನೆ ತನಿಖೆ ನಡೆಸಲು ಸಮಿತಿಯಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ 13 ಶಾಸಕರು, ಸ್ಪೀಕರ್ ನ್ಯಾನ್ಸಿ ಪೆಲೋಸಿ ನೇಮಿಸಿದ ಎಂಟು ಮಂದಿ ಮತ್ತು ಹೌಸ್ ಮೈನಾರಿಟಿ ಮುಖಂಡ ಕೆವಿನ್ ಮೆಕಾರ್ಥಿ ನೇಮಿಸಿದ ಐದು ಮಂದಿ ಸದಸ್ಯರು ಇದ್ದಾರೆ.

ಇವಾಂಕಾ ಟ್ರಂಪ್​

ಚುನಾವಣಾ ಫಲಿತಾಂಶಗಳನ್ನು ತಿರಸ್ಕರಿಸುವಂತೆ ಆಗಿನ ಉಪಾಧ್ಯಕ್ಷ ಮೈಕ್ ಪೆನ್ಸ್‌ಗೆ ಒತ್ತಡ ಹೇರುವಂತೆ ಡೊನಾಲ್ಡ್ ಟ್ರಂಪ್​​​ಗೆ ಇವಾಂಕಾ ಟ್ರಂಪ್ ಸೂಚಿಸಿದ್ದರು. ಈ ಕುರಿತು ದೂರವಾಣಿ ಕರೆ ಮೂಲಕ ಮಾತನಾಡಿದ ಸಾಕ್ಷಿ ಲಭ್ಯವಾಗಿದ್ದು, ಈ ಸಂಬಂಧ ಇವಾಂಕಾ ಟ್ರಂಪ್ ಫೆಬ್ರವರಿ ಆರಂಭದಲ್ಲಿ ತನಿಖೆಗೆ ಸ್ವಯಂಪ್ರೇರಣೆಯಿಂದ ಬಂದು ಸಹಕರಿಸುವಂತೆ ಸದನ ಸಮಿತಿ ಸದಸ್ಯರು ಪತ್ರ ಬರೆಯುವ ಮೂಲಕ ಕೇಳಿಕೊಂಡಿದ್ದಾರೆ.

ಓದಿ:1200 ಕೋಟಿ ರೂ. ವೆಚ್ಚದಲ್ಲಿ ‘ಶಿರಾಡಿ ಘಾಟ್​ ರಸ್ತೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅನುಮೋದನೆ: ಸಿಎಂ ಬೊಮ್ಮಾಯಿ

ABOUT THE AUTHOR

...view details