ನ್ಯೂ ಹೆವನ್( ಅಮೆರಿಕ): ಕ್ರಿಸ್ಟೋಫರ್ ಕೊಲಂಬಸ್ ಅವರ ಪ್ರತಿಮೆಯನ್ನು ನ್ಯೂ ಹೆವನ್‌ನ ವೂಸ್ಟರ್ ಚೌಕದಿಂದ ಬುಧವಾರ ತೆಗೆದು ಹಾಕಲಾಗಿದೆ.
ನ್ಯೂ ಹೆವನ್‌ನ ವೂಸ್ಟರ್ ಚೌಕದಿಂದ ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆ ತೆರವು - ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆ
ಅಮೆರಿಕದಲ್ಲಿ ಜನಾಂಗೀಯ ಹಲ್ಲೆಗಳ ವಿರುದ್ಧದ ಪ್ರತಿಭಟನೆ ಕಾವು ಇನ್ನೂ ಆರಿಲ್ಲ. ಹೀಗಾಗಿ ಅನೇಕ ಪ್ರತಿಮೆಗಳನ್ನ ಮುನ್ನೆಚ್ಚರಿಕೆ ಕ್ರಮವಾಗಿ ತೆರವು ಮಾಡಲಾಗುತ್ತಿದೆ. ಬುಧವಾರ ಮಧ್ಯಾಹ್ನ, ಕೊಲಂಬಸ್ ಪ್ರತಿಮೆ ತೆಗೆಯುವ ವೇಳೆ ವಿರೋಧ ವ್ಯಕ್ತವಾಯಿತು. ಕೆಲಕಾಲ ಮಾತಿನ ಚಕಮಕಿ ನಡೆದು ನಂತರ ಅದು ಉದ್ವಿಗ್ನ ರೂಪ ಪಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆ ತೆರವು
ಬುಧವಾರ ಮಧ್ಯಾಹ್ನ, ಕೊಲಂಬಸ್ ಪ್ರತಿಮೆ ತೆಗೆಯುವ ವೇಳೆ ವಿರೋಧ ವ್ಯಕ್ತವಾಯಿತು. ಕೆಲಕಾಲ ಮಾತಿನ ಚಕಮಕಿ ನಡೆದು ನಂತರ ಅದು ಉದ್ವಿಗ್ನ ರೂಪ ಪಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ರಾಷ್ಟ್ರದಾದ್ಯಂತ ನಗರಗಳಲ್ಲಿ ಜನಾಂಗೀಯ ಅನ್ಯಾಯದ ವಿರುದ್ಧದ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರು ಐತಿಹಾಸಿಕ ಸ್ಮಾರಕಗಳು ಮತ್ತು ಇಂತಹ ಇತಿಹಾಸವುಳ್ಳ ವ್ಯಕ್ತಿಗಳ ಪ್ರತಿಮೆಗಳನ್ನು ದ್ವಂಸ ಮಾಡುತ್ತಿದ್ದಾರೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಈ ಪ್ರತಿಮೆಯನ್ನ ತೆಗೆಯಲಾಗುತ್ತಿದೆ ಎಂದು ನ್ಯೂ ಹೆವನ್ ನಗರದ ಅಧಿಕಾರಿಗಳು ತಿಳಿಸಿದ್ದಾರೆ.