ಕರ್ನಾಟಕ

karnataka

ETV Bharat / international

ಭಾರತ ಆಯ್ತು, ಅಮೆರಿಕದಿಂದಲೂ ಎತ್ತಂಗಡಿಯಾಗ್ತವಾ ಚೀನಾ ಆ್ಯಪ್​ಗಳು..?

ಚೀನಾದ ಮೇಲೆ ಅಮೆರಿಕ ಕೂಡಾ ಡಿಜಿಟಲ್​ ಸ್ಟ್ರೈಕ್​ಗೆ ಮುಂದಾಗಿದೆ. ಚೀನಾ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡುವ ಚಿಂತನೆ ನಡೆಸಿರುವುದಾಗಿ ಅಮೆರಿಕದ ಸಚಿವರೊಬ್ಬರು ಹೇಳಿದ್ದಾರೆ.

mike pompeo
ಮೈಕ್​ ಪೋಂಪಿಯೋ

By

Published : Jul 7, 2020, 11:02 AM IST

ವಾಷಿಂಗ್ಟನ್​ ಡಿಸಿ (ಅಮೆರಿಕ): ಭದ್ರತೆಯ ಕಾರಣ ನೀಡಿ ಭಾರತ ಚೀನಾದ 59 ಮೊಬೈಲ್​ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡಿದ ಬೆನ್ನಲ್ಲೇ ಅಮೆರಿಕ ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಚಿಂತನೆ ನಡೆಸಿದೆ.

ಅಮೆರಿಕದ ಸೆಕ್ರೆಟರಿ ಆಫ್​ ಸ್ಟೇಟ್ಸ್​ ಮೈಕ್​ ಪೋಂಪಿಯೋ ಟಿಕ್​ಟಾಕ್​ ಸೇರಿದಂತೆ ಚೀನಾ ಮೂಲದ ಸಾಮಾಜಿಕ ಜಾಲತಾಣಗಳ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡಲು ಚಿಂತನೆ ನಡೆಸಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಈ ಹಿಂದೆ ಭಾರತ ಚೀನಾದ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡಿದಾಗ ಭಾರತದ ಕ್ರಮವನ್ನು ಅಮೆರಿಕ ಶ್ಲಾಘಿಸಿತ್ತು. ಈಗ ಸ್ವತಃ ಅಮೆರಿಕದ ಸಚಿವರೇ ಚೀನಾ ಅಪ್ಲಿಕೇಷನ್​ಗಳನ್ನು ಬ್ಯಾನ್ ಮಾಡುವ ಮಾತಾಡಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ಇದೇ ರೀತಿ ಮತ್ತಷ್ಟು ರಾಷ್ಟ್ರಗಳು ಚೀನಾದ ಆರ್ಥಿಕತೆ ಮೇಲೆ ಡಿಜಿಟಲ್​ ಸ್ಟ್ರೈಕ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಮತ್ತೊಂದೆಡೆ ತನ್ನ ಸ್ವಾಯುತ್ತ ಭಾಗವಾದ ಹಾಂಕಾಂಗ್​ನಲ್ಲಿ ಚೀನಾ ತನ್ನ ಟಿಕ್​​ಟಾಕ್​ ಅಪ್ಲಿಕೇಷನ್​ನ ಕಾರ್ಯಾಚರಣೆ ನಿಲ್ಲಿಸಲು ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.

ABOUT THE AUTHOR

...view details