ಕರ್ನಾಟಕ

karnataka

ETV Bharat / international

ಚೀನಾಕ್ಕೆ ದೊಡ್ಡಣ್ಣನ ಮತ್ತೊಂದು ಶಾಕ್​:ಇಷ್ಟು ವಾಣಿಜ್ಯ ಸಂಸ್ಥೆಗಳು ಕಪ್ಪು ಪಟ್ಟಿಗೆ

ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಚೀನಾದ 28 ವಾಣಿಜ್ಯ ಸಂಸ್ಥೆಗಳನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕಾದ ವಾಣಿಜ್ಯ ಸಂಸ್ಥೆ ಸೋಮವಾರ ತಿಳಿಸಿದೆ. ಚೀನಿ ಸಂಸ್ಥೆಗಳ ಉತ್ಪನ್ನಗಳನ್ನು ಅಮೆರಿಕ ಜನರು ಬಳಸದಂತೆ ಎಚ್ಚರಿಕೆ ನೀಡಿದೆ. ಚೀನಾ ಸಂಸ್ಥೆಗಳು ಉಗಾರ್ಸ್ ಮತ್ತು ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸಿ ಪ್ರಚಾರಾಂದೋಲನ ನಡೆಸುತ್ತಿವೆ ಎಂದು ಆರೋಪ ಮಾಡಲಾಗಿದೆ.

ಚೀನಾದ ವಾಣಿಜ್ಯ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ ದೊಡ್ಡಣ್ಣ

By

Published : Oct 8, 2019, 1:30 PM IST

ವಾಷಿಂಗ್ಟನ್:ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಚೀನಾದ 28 ವಾಣಿಜ್ಯ ಸಂಸ್ಥೆಗಳನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕದ ವಾಣಿಜ್ಯ ಸಂಸ್ಥೆ ಸೋಮವಾರ ತಿಳಿಸಿದೆ.

ಚೀನಾ ಸಂಸ್ಥೆಗಳು ಉಗಾರ್ಸ್ ಮತ್ತು ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸಿ ಪ್ರಚಾರಾಂದೋಲನ ನಡೆಸುತ್ತಿವೆ ಎಂದು ಆರೋಪ ಮಾಡಲಾಗಿದೆ. ಚೀನಿ ಸಂಸ್ಥೆಗಳ ಉತ್ಪನ್ನಗಳನ್ನು ಅಮೆರಿಕ ಜನರು ಬಳಸದಂತೆ ಎಚ್ಚರಿಕೆ ನೀಡಿದೆ.

ಪ್ರಮುಖ ಸಂಸ್ಥೆಗಳಾದ ಜೆಜಿಯಾಂಗ್​ ದುಹಾ ಟೆಕ್ನಾಲಜಿ, ಇಪ್ಲಿಟೆಕ್​ ಕೋ, ಕ್ಸಿಯಾಮೆನ್ ಮೆಯಾ ಪಿಕೋ ಇನ್ಫಾರ್ಮೆಷನ್​ ಕೋ ಮತ್ತು ವೈಕ್ಸೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ವಿಶ್ವದ ಅತಿದೊಡ್ಡ ಉತ್ಪನ್ನ ಕಂಪನಿ ಹಿಕ್ವಿಸನ್ ದುಹಾ ಕಂಪನಿಗಳು ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿವೆ ಎಂದು ಅಮೆರಿಕ ಆರೋಪಿಸಿದೆ.

ಜನರ ಗುಪ್ತ ಮಾಹಿತಿ ಮತ್ತು ರಕ್ಷಣೆಗೆ ತೊಂದರೆಯನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ಈ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕ ವಾಣಿಜ್ಯ ಸಂಸ್ಥೆ ತಿಳಿಸಿದೆ. ಇದರಿಂದ ಯೂರೋಪ್ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್ಥಿಕ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details