ವಾಷಿಂಗ್ಟನ್ (ಯು.ಎಸ್):ಚೀನಾ ತನ್ನ ಆಡಳಿತದಲ್ಲಿ ಯು.ಎಸ್.ನಿಂದ ತೀವ್ರ ಸ್ಪರ್ಧೆ ಹೊಂದಿದೆ. ಆದರೆ ಸಂಘರ್ಷದ ಸಂಬಂಧ ಹೊಂದಬೇಕಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇನ್ನೂ ಮಾತುಕತೆ ನಡೆಸಿಲ್ಲ ಎಂದು ಜೋ ಬೈಡನ್ ತಿಳಿಸಿದ್ದು, ಆದರೆ, ಇಬ್ಬರೂ ತಮ್ಮ ರಾಷ್ಟ್ರಗಳ ಉಪಾಧ್ಯಕ್ಷರಾಗಿದ್ದಾಗ ಅನೇಕ ಬಾರಿ ಭೇಟಿಯಾಗಿದ್ದೆವು ಎಂದು ತಿಳಿಸಿದ್ದಾರೆ.