ವಾಷಿಂಗ್ಟನ್:ಕೊರೊನಾ ಹೇಗೆ ಹುಟ್ಟಿಕೊಂಡಿದೆ ಎಂಬುದನ್ನು ಸರಿಯಾಗಿ ತನಿಖೆ ಮಾಡಲು ಪಾಶ್ಚಿಮಾತ್ಯ ಜಗತ್ತಿಗೆ ಚೀನಾ ಪ್ರವೇಶವನ್ನು ನಿರ್ಬಂಧಿಸುತ್ತಿದೆ. ಇಲ್ಲಿನ ವಿಶ್ವದ ಅತ್ಯುತ್ತಮ ವಿಜ್ಞಾನಿಗಳು ಜಗತ್ತಿನಲ್ಲಿ ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ನಿಭಾಯಿಸಲು ಸಹಕರಿಸುತ್ತಿಲ್ಲ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಆರೋಪಿಸಿದ್ದಾರೆ.
ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಲೀಕ್ ಆಗಿದೆ ಎಂದು ಅಮೆರಿಕ ಆರೋಪಿಸುತ್ತಲೇ ಬರುತ್ತಿದೆ. ಈ ಬಗ್ಗೆ ನೇರ ಆರೋಪ ಮಾಡಲು ನಿರಾಕರಿಸಿರುವ ಪೊಂಪಿಯೊ ಆ ಬಗ್ಗೆ ನಾನೇನೂ ಹೇಳಲಿಚ್ಛಿಸುವುದಿಲ್ಲ. ಇದಕ್ಕೆ ಶೀಘ್ರದಲ್ಲೇ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.