ಕರ್ನಾಟಕ

karnataka

ETV Bharat / international

ಅಭಿವೃದ್ಧಿಯತ್ತ ಸಾಗುತ್ತಿರುವ ಭಾರತವನ್ನು ಚೀನಾ ತನ್ನ ಪ್ರತಿಸ್ಪರ್ಧಿ ಎನ್ನುತ್ತಿದೆ: ವಿದೇಶಾಂಗ ಇಲಾಖೆ ವರದಿ

ಚೀನಾ ಅಭಿವೃದ್ಧಿಯತ್ತಾ ಸಾಗುತ್ತಿರುವ ಭಾರತವನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುತ್ತಿದೆ. ಯುಎಸ್, ಜಪಾನ್, ಆಸ್ಟ್ರೇಲಿಯಾ ಮತ್ತು ಇತರ ಪ್ರಜಾಪ್ರಭುತ್ವಗಳೊಂದಿಗಿನ ತನ್ನ ಕಾರ್ಯವನ್ನು ನಿರ್ಬಂಧಿಸಲು ಮುಂದಾಗಿದೆ ಎಂದು ವಿದೇಶಾಂಗ ಇಲಾಖೆ ವರದಿ ಹೇಳಿದೆ.

ಚೀನಾ-ಭಾರತ
ಚೀನಾ-ಭಾರತ

By

Published : Nov 19, 2020, 5:45 PM IST

ವಾಷಿಂಗ್ಟನ್:ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ಚೀನಾ ತನ್ನ "ಪ್ರತಿಸ್ಪರ್ಧಿ" ಎಂದು ಭಾವಿಸಲಿದೆ. ಹಾಗಾಗಿ ಚೀನಾ ಭಾರತದ ಮಿತ್ರರಾಷ್ಟ್ರಗಳು ಮತ್ತು ಇತರ ಪ್ರಜಾಪ್ರಭುತ್ವಗಳೊಂದಿಗೆ ತನ್ನ ಕಾರ್ಯತಂತ್ರದ ಸಹಭಾಗಿತ್ವವನ್ನು ನಿರ್ಬಂಧಿಸಲು ಮುಂದಾಗಿದೆ ಎಂದು ವಿದೇಶಾಂಗ ಇಲಾಖೆಯ ವರದಿಯಿಂದ ತಿಳಿದುಬಂದಿದೆ.

ಅಲ್ಲದೇ ಅಮೆರಿಕವನ್ನು ಹಿಂದಿಕ್ಕುವುದು ಚೀನಾದ ಉದ್ದೇಶವಾಗಿದೆ ಎಂದು ಹೇಳಿದೆ. ಡೊನಾಲ್ಡ್​ ಟ್ರಂಪ್​ ಅವರಿಂದ ಚುನಾಯಿತ ಅಧ್ಯಕ್ಷ ಜೋ ಬೈಡನ್​ ಅವರಿಗೆ ಅಧಿಕಾರ ಹಂಸ್ತಾತರ ಮಾಡುವ ಮೊದಲೇ, ಚೀನಾ ಅನೇಕ ರಾಷ್ಟ್ರಗಳ ಭದ್ರತೆ, ಸ್ವಾಯತ್ತತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತಿದೆ ಎಂದು ವರದಿ ಹೇಳಿದೆ.

"ಚೀನಾ ಕೆಲವು ಪ್ರದೇಶಗಳ ಸುರಕ್ಷತೆ, ಸ್ವಾಯತ್ತತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತಿದೆ. ಉದಾಹರಣೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಏಷಿಯಾನ್) ಸದಸ್ಯ ರಾಷ್ಟ್ರಗಳು, ಪ್ರಮುಖವಾಗಿ ಮೆಕಾಂಗ್ ಪ್ರದೇಶ ಮತ್ತು ಪೆಸಿಫಿಕ್ ದ್ವೀಪಗಳ ರಾಷ್ಟ್ರಗಳು ಎಂದು" ವರದಿ ಹೇಳಿದೆ. ಚೀನಾದ ಕಮ್ಯುನಿಸ್ಟ್​​ ಪಾರ್ಟಿ ವಿಶ್ವದಾದ್ಯಂತ ಹೊಸ ಯುಗವನ್ನು ಹುಟ್ಟು ಹಾಕುತ್ತಿದೆ ಎಂಬುದನ್ನು ಯುಎಸ್​ ಮತ್ತು ಅನೇಕ ರಾಷ್ಟ್ರಗಳಿಗೆ ತಿಳಿದಿದೆ ಎಂದು 70 ಪುಟಗಳ ವರದಿ ಹೇಳುತ್ತದೆ.

"ಇನ್ನೂ ಕೆಲವರು ವಿಶ್ವದ ಪ್ರತಿಯೊಂದು ಪ್ರದೇಶದೊಳಗಿನ ಚೀನಾದ ಅತಿಕ್ರಮಣಗಳ ಮಾದರಿಯನ್ನು ಗ್ರಹಿಸುತ್ತಿದ್ದಾರೆ" ಎಂದು ವರದಿ ಹೇಳಿದೆ. "ಚೀನಾದ ಸವಾಲನ್ನು ಎದುರಿಸಬೇಕೆಂದರೆ ಯುಎಸ್ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು" ಎಂದು ವರದಿ ಹೇಳಿದೆ.

ಚೀನಾದ ಪ್ರಾಬಲ್ಯ ಅನಿವಾರ್ಯ ಎಂಬ ಪ್ರಜ್ಞೆಯನ್ನು ರಾಷ್ಟ್ರಗಳಲ್ಲಿ ಬೆಳೆಸುವ ಮೂಲಕ ಚೀನಾ ಯುಎಸ್ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಎಂದು ಅದು ಹೇಳಿದೆ.

ABOUT THE AUTHOR

...view details