ವಾಷಿಂಗ್ಟನ್: ಪ್ರಪಂಚದಾದ್ಯಂತ 12 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಸೋಂಕು ತಗುಲಿದ ಸಮಯದಲ್ಲಿ ಹಾಂಗ್ ಕಾಂಗ್‌ನ ವಿಜ್ಞಾನಿಯೊಬ್ಬರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 'ಚೀನಾ ಸರ್ಕಾರವು ಮಾರಣಾಂತಿಕ ವೈರಸ್ ಬಗ್ಗೆ ಹೇಳಿಕೊಳ್ಳುವ ಮೊದಲೇ ತಿಳಿದಿತ್ತು' ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಹಾಂಗ್ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ವೈರಾಲಜಿ ಮತ್ತು ಇಮ್ಯುನೊಲಾಜಿಯಲ್ಲಿ ಪರಿಣತಿ ಹೊಂದಿರುವ ಲಿ ಮೆಂಗ್ ಯಾನ್, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಸ್ಥಾನಮಾನವನ್ನು ತನ್ನ ಗಮನದಲ್ಲಿ ಇಟ್ಟುಕೊಂಡು ಇನ್ಫ್ಲ್ಯೂಯೆಂಜಾ ವೈರಸ್ ಮತ್ತು ಸಾಂಕ್ರಾಮಿಕ ರೋಗಗಳಲ್ಲಿ ಪರಿಣತಿ ಹೊಂದಿರುವ ಉಲ್ಲೇಣಿತ ಪ್ರಯೋಗಾಲಯ, ವಿಶೇಷವಾಗಿ 2020ರ ಆರಂಭಿಕ ದಿನಗಳಲ್ಲಿ ವೈರಸ್ ಹರಡಲು ಪ್ರಾರಂಭಿಸಿತು ಎಂಬುದರ ಬಗ್ಗೆ ಹೇಳಬಹುದಿತ್ತು ಎಂದು ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಕ್ಷೇತ್ರದ ಉನ್ನತ ತಜ್ಞರು, ಮೇಲ್ವಿಚಾರಕರು ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಅವರು ಮಾಡುತ್ತಿರುವ ಸಂಶೋಧನೆಗಳನ್ನು ಸಹ ನಿರ್ಲಕ್ಷಿಸಿದ್ದಾರೆ ಎಂದಿದ್ದಾರೆ.