ವಾಷಿಂಗ್ಟನ್: ಚೀನಾದಲ್ಲಿ ಬೆಳೆಯುತ್ತಿರುವ ಮಿಲಿಟರಿ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , 'ಕಮ್ಯುನಿಸ್ಟ್ ರಾಷ್ಟ್ರವು ಜಗತ್ತಿಗೆ ಅಪಾಯವಾಗಿದೆ' ಎಂದು ಹೇಳಿದ್ದಾರೆ.
ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಅಮೆರಿಕದ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಕದಿಯುವುದನ್ನು ತಡೆಯದಿರುವುದಕ್ಕೆ ಚೀನಾವನ್ನು ದೋಷಿಸಿದ ಟ್ರಂಪ್, ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಹೊರಹಾಕುವ ಉದ್ದೇಶವನ್ನು ಬೀಜಿಂಗ್ ಹೊಂದಿದೆ. ಹಾಗಾಗಿ, ಚೀನಾ ತನ್ನ ಮಿಲಿಟರಿ ವೆಚ್ಚವನ್ನು ಶೇ 7 ಹೆಚ್ಚಿಸಿ 152 ಶತಕೋಟಿ ಡಾಲರ್ನಷ್ಟು ಖರ್ಚು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಿಸ್ಸಂಶಯವಾಗಿ ಚೀನಾ ಒಂದರ್ಥದಲ್ಲಿ ಜಗತ್ತಿಗೆ ಬೆದರಿಕೆಯಾಗಿದೆ. ಏಕೆಂದರೆ ಅವರು ಎಲ್ಲರಿಗಿಂತ ವೇಗವಾಗಿ ಮಿಲಿಟರಿ ಸಾಮರ್ಥ್ಯ ಹೊಂದುತ್ತಿದ್ದಾರೆ. ಅಮೆರಿಕo ಹಣವನ್ನು ಇದಕ್ಕಾಗಿಯೇ ಬಳಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರಿಗೆ ಹೇಳಿದರು.
ತನಗೆ ಮುಂಚಿನ ಅಮೆರಿಕ ಅಧ್ಯಕ್ಷರು ಚೀನಾಕ್ಕೆ ವಾರ್ಷಿಕ 500 ಬಿಲಿಯನ್ ಡಾಲರ್ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಜೊತೆಗೆ ಅವರು ನಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕದಿಯಲು ಚೀನಾಕ್ಕೆ ಅವಕಾಶ ನೀಡಿದ್ದಾರೆ. ನಾನು ಅದನ್ನು ಮಾಡುತ್ತಿಲ್ಲ ಎಂದರು. ಪ್ರಧಾನಿ ನರೇಂದ್ರವ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡ ಬೆನ್ನಲ್ಲೇ ಚೀನಾದ ನಡೆಯನ್ನು ಪ್ರಶ್ನಿಸಿ ಗಂಭೀರ ಹೇಳಿಕೆ ನೀಡಿದ್ದು, ಮೋದಿಯ ಭೇಟಿ ಫಲಪ್ರದವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.