ಬೀಜಿಂಗ್:ಚೀನಾ ತನ್ನ ರಾಷ್ಟ್ರೀಯ ದಿನದಂದು ವಿಶ್ವದ ಅತ್ಯಂತ ಶಕ್ತಿಶಾಲಿ ಡಿಎಫ್-41 ಖಂಡಾಂತರ ಶ್ರೇಣಿಯ ಕ್ಷಿಪಣಿಯನ್ನು ಅನಾವರಣಗೊಳಿಸಿದೆ.
ಡಿಎಫ್- 41 ಕ್ಷಿಪಣಿ ಭೂಮಿ ಮೇಲಿನ ಯಾವುದೇ ಕ್ಷಿಪಣಿಗಿಂತ ಅತ್ಯಂತ ಬಲಿಷ್ಠವಾಗಿದ್ದು, 9,320 ಮೈಲಿಗಳಷ್ಟು (15,000 ಕಿಲೋ ಮೀಟರ್) ದೂರದವರೆಗೂ ಕ್ರಮಿಸಬಲ್ಲದು. ಸ್ವತಂತ್ರವಾಗಿ 10 ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿ 30 ನಿಮಿಷಗಳಲ್ಲಿ ಅಮೆರಿಕ ತಲುಪಬಲ್ಲದು ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ ತಿಳಿಸಿದೆ.