ಬೀಜಿಂಗ್ :ಅರೆವಾಹಕ (ಗಣಕಯಂತ್ರ) ಉತ್ಪಾದನಾ ಉದ್ಯಮ ಉತ್ತೇಜಿಸಲು ಚೀನಾ ಸರ್ಕಾರ ತ್ವರಿತ ಕ್ರಮ ಕೈಗೊಂಡಿದ್ದು, ಈ ವಲಯದ ಕಂಪನಿಗಳಿಗೆ 2030ರವರೆಗೆ ತೆರಿಗೆ ರಜೆ ಘೋಷಿಸಿದೆ.
ಅಮೆರಿಕ ನಿರ್ಬಂಧಗಳ ಹಿನ್ನೆಲೆ ಚೀನಾ ಅಮೆರಿಕದ ಉದ್ಯಮವನ್ನು ತಗ್ಗಿಸುವ ಕ್ರಮಗಳನ್ನು ಪ್ರಾರಂಭಿಸಿದೆ. ಈ ವರ್ಷದ ಆರ್ಥಿಕ ಗುರಿಗಳಲ್ಲಿ ಅರೆವಾಹಕಗಳಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಆ ದಿಕ್ಕಿನಲ್ಲಿ ಅಗತ್ಯ ಕ್ರಮಗಳನ್ನು ಚುರುಕುಗೊಳಿಸುವಂತೆ ಚೀನಾದ ಕಮ್ಯುನಿಸ್ಟ್ ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದೆ.
ಇತ್ತೀಚಿನ ತೆರಿಗೆ ರಜೆ ಪ್ರಕಾರ, ಅರೆವಾಹಕಗಳು ಮತ್ತು ಎಲೆಕ್ಟ್ರಾನಿಕ್ ಚಿಪ್ ತಯಾರಕರು ತಮ್ಮ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳು ಹಾಗೂ ಯಂತ್ರೋಪಕರಣಗಳನ್ನು ಯಾವುದೇ ಕಸ್ಟಮ್ ಆಮದು ಮಾಡಿಕೊಳ್ಳಬಹುದು. ಆದರೆ, ಆಮದುಗಳಿಗೆ ಎಷ್ಟು ರಿಯಾಯಿತಿ ಅನ್ವಯಿಸುತ್ತದೆ ಎಂಬುದನ್ನು ಹೇಳಲ್ಲ.
ಇದನ್ನೂ ಓದಿ: 6 ದಿನಗಳ ಬಳಿಕ ಮರಳು ರಾಶಿಯಿಂದ ಮೇಲೆದ್ದ ಸೂಯೆಜ್ ಕಾಲುವೆಯ ಬೃಹತ್ ಹಡಗು!
ಚಿಪ್ಸ್ ಮತ್ತು ಅರೆವಾಹಕ ಉತ್ಪಾದನಾ ಕೈಗಾರಿಕೆಗಳನ್ನು ಸ್ಥಾಪಿಸಲು ಚೀನಾ ಕಳೆದ ಎರಡು ದಶಕಗಳಲ್ಲಿ ಭಾರಿ ಹಣ ಖರ್ಚು ಮಾಡಿದೆ. ಈ ಕಂಪನಿಗಳು ಕಚ್ಚಾ ಸಾಮಗ್ರಿಗಳಿಗಾಗಿ ಅಮೆರಿಕ, ಯುರೋಪ್ ಮತ್ತು ತೈವಾನ್ ಅವಲಂಬಿಸಿವೆ.
ಟ್ರಂಪ್ ಆಡಳಿತದ ಅವಧಿಯಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧಗಳು ಸಂಪೂರ್ಣ ಹದಗೆಟ್ಟಿದ್ದವು. ಈ ಮಧ್ಯೆ ಅಧ್ಯಕ್ಷ ಟ್ರಂಪ್ ಅರೆವಾಹಕಗಳು ಮತ್ತು ಚಿಪ್ ತಯಾರಕರಿಗೆ ಹುವಾವೇ ಸೇರಿದಂತೆ ಹಲವು ಚೀನಾದ ಟೆಕ್ ಕಂಪನಿಗಳಿಗೆ ಸರಬರಾಜು ಕಡಿತಗೊಳಿಸುವಂತೆ ಆದೇಶಿಸಿದ್ದರು.
ಬೈಡೆನ್ ಅಧಿಕಾರಕ್ಕೆ ಬಂದ ನಂತರ ಈ ಆದೇಶಗಳನ್ನು ಮುಂದುವರಿಸಲಾಯಿತು. ಇದರ ಪರಿಣಾಮವಾಗಿ, ಅಮೆರಿಕದಿಂದದ ಚೀನಾಕ್ಕೆ ಆಮದು ಸಂಪೂರ್ಣ ಸ್ಥಗಿತಗೊಂಡಿತು. ವಿಶ್ವದ ಪ್ರಮುಖ ಮೊಬೈಲ್ ತಂತ್ರಜ್ಞಾನ ತಯಾರಕ ಹುವಾವೇ ಕಳೆದ ವರ್ಷದ ಅಂತ್ಯದ ವೇಳೆಗೆ ಐದನೇ ಸ್ಥಾನಕ್ಕೆ ಕುಸಿದಿದೆ.
ಈ ಹಿನ್ನೆಲೆಯಲ್ಲಿ ಚಿಪ್ಸ್ ಮತ್ತು ಅರೆವಾಹಕಗಳಿಗೆ ಇತರ ದೇಶಗಳನ್ನು ಅವಲಂಬಿಸದಿರಲು ಚೀನಾ ನಿರ್ಧರಿಸಿದೆ. ಈ ವಲಯದಲ್ಲಿ ಆದಷ್ಟು ಬೇಗ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ.