ಜಿನಿವಾ: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಯುಎಸ್ನ ವೈಫಲ್ಯ, ಅಲ್ಲಿ ಜನರು ಎದುರಿಸುತ್ತಿರುವ ಜನಾಂಗೀಯ ತಾರತಮ್ಯ, ಪೊಲೀಸ್ ಕ್ರೂರತೆಯ ವಿರುದ್ಧ ಚೀನಾ ಧ್ವನಿ ಎತ್ತಿದೆ.
ಜಿನಿವಾದಲ್ಲಿ ಚೀನಾದ ಮಿಷನ್‌ನ ಸಲಹೆಗಾರ ಜಿಯಾಂಗ್ ಡುವಾನ್ ಮಾತನಾಡಿ, ವಿದೇಶದಲ್ಲಿ ಯುಎಸ್ನ ಹಸ್ತಕ್ಷೇಪ ಅಪಾರ ನಾಗರಿಕರ ಸಾವಿಗೆ ಕಾರಣವಾಯಿತು ಮತ್ತು ಇತರ ದೇಶಗಳಲ್ಲಿ ಮುಗ್ಧ ನಾಗರಿಕರನ್ನು ಹತ್ಯೆ ಮಾಡಿ ಚಿತ್ರಹಿಂಸೆ ನಡೆಸಿದೆ ಎಂದು ಟೀಕಿಸಿದರು.
ಮಾನವ ಹಕ್ಕುಗಳ ಮಂಡಳಿಯಲ್ಲಿ ಯುಎಸ್ ಹಕ್ಕುಗಳ ದಾಖಲೆಯ ಪರಿಶೀಲನೆಯ ಕೊನೆಯಲ್ಲಿ ಈ ಟೀಕೆ ವ್ಯಕ್ತಪಡಿಸಿದರು. ಚೀನಾದ ರಾಜತಾಂತ್ರಿಕರ ಹೆಚ್ಚುತ್ತಿರುವ ಮಾತುಕತೆ ಮತ್ತು ವಿಶ್ವದ ಅಗ್ರ ಎರಡು ಆರ್ಥಿಕ ಶಕ್ತಿಗಳ ನಡುವಿನ ಪೈಪೋಟಿಗೆ ಈ ಹೇಳಿಕೆಗಳು ಸಾಕ್ಷಿಯಾಗಿವೆ.