ಪ್ರಾವಿಡೆನ್ಸ್(ಅಮೆರಿಕಾ): ಕೊರೊನಾ ವೈರಸ್ ಲಸಿಕೆ ಸಿದ್ಧವಾಗುತ್ತಿದೆ. ನವೆಂಬರ್ 1ರಿಂದ ವಿತರಿಸಲು ಸಿದ್ಧವಾಗಿ ಎಂದು ಫೆಡರಲ್ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ.
"ಅಕ್ಟೋಬರ್ ಸರ್ಪ್ರೈಸ್" ಬಗ್ಗೆ ಸಾರ್ವಜನಿಕ ಆರೋಗ್ಯ ತಜ್ಞರಲ್ಲಿ ಕಳವಳ ವ್ಯಕ್ತವಾಗಿದೆ. ಲಸಿಕೆ ಅನುಮೋದನೆಯು ವಿಜ್ಞಾನಕ್ಕಿಂತ ಹೆಚ್ಚಾಗಿ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪರಿಗಣನೆಗಳಿಂದ ಬಳಕೆಯಾಗಲಿದೆಯೇ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಆಗಸ್ಟ್ 27ರಂದು ಗವರ್ನರ್‌ಗಳಿಗೆ ಬರೆದ ಪತ್ರದಲ್ಲಿ, ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಡ್, ರಾಜ್ಯಗಳು ಮತ್ತು ಸ್ಥಳೀಯ ಆರೋಗ್ಯ ಇಲಾಖೆಗಳು ಮತ್ತು ಆಸ್ಪತ್ರೆಗಳಿಗೆ ಲಸಿಕೆಗಳನ್ನು ವಿತರಿಸಲು ಸಿಡಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೆಕ್‌ಕೆಸನ್ ಕಾರ್ಪ್‌ನಿಂದ ರಾಜ್ಯಗಳು ಶೀಘ್ರದಲ್ಲೇ ಪರವಾನಗಿ ಅರ್ಜಿಗಳನ್ನು ಸ್ವೀಕರಿಸಲಿವೆ ಎಂದು ಹೇಳಿದ್ದಾರೆ.
"ಈ ವಿತರಣಾ ಸೌಲಭ್ಯಗಳಿಗಾಗಿ ಅರ್ಜಿಗಳನ್ನು ತ್ವರಿತಗೊಳಿಸಲು ಸಿಡಿಸಿ ತುರ್ತಾಗಿ ನಿಮ್ಮ ಸಹಾಯವನ್ನು ಕೋರುತ್ತದೆ ಮತ್ತು ಅಗತ್ಯವಿದ್ದರೆ 2020ರ ನವೆಂಬರ್ 1ರಿಂದ ಈ ಸೌಲಭ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ತಡೆಯುವಂತಹ ಅಡೆತಡೆಗಳನ್ನು ಪರಿಗಣಿಸುವಂತೆ ಕೇಳುತ್ತದೆ" ಎಂದು ರೆಡ್‌ಫೀಲ್ಡ್ ಬರೆದಿದ್ದಾರೆ.