ಮನಗುವಾ:ನಿಕರಾಗುವಾ ಪ್ರದೇಶದಲ್ಲಿ ಎದ್ದಿರುವ ಭೀಕರ ಅಯೋಟ ಚಂಡಮಾರುತವು ಉತ್ತರ ಕೆರಿಬಿಯನ್ ಕರಾವಳಿಯಲ್ಲಿ ಭೂಕುಸಿತಕ್ಕೆ ಕಾರಣವಾಗಿದ್ದು, ಇದೀಗ ಮಧ್ಯ ಅಮೆರಿಕಾದತ್ತ ಸಾಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಅಯೋಟ ಚಂಡಮಾರುತವು ಕೊಲಂಬಿಯಾದ ದ್ವೀಪಗಳಾದ ಸ್ಯಾನ್ ಆಂಡ್ರೆಸ್ ಮತ್ತು ಪ್ರಾವಿಡೆನ್ಸಿಯಾವನ್ನು ವರ್ಗ 4ರ ಚಂಡಮಾರುತವೆಂದು ಕರೆಯಲಾದರೆ ಮತ್ತು ಈಗ ಮಧ್ಯ ಅಮೆರಿಕದತ್ತ ಸಾಗುತ್ತಿರುವ ಚಂಡಮಾರುತವು ವರ್ಗ 5ಕ್ಕೆ ಸೇರಲ್ಪಟ್ಟಿದೆ.
ರಾಷ್ಟ್ರೀಯ ಚಂಡಮಾರುತ ಕೇಂದ್ರದ ಸಲಹೆಯ ಪ್ರಕಾರ, ಚಂಡಮಾರುತವು ಹಾಲೋವರ್ ಪಟ್ಟಣದ ಬಳಿ ರಾತ್ರಿ 10:40ಕ್ಕೆ 155 ಮೈಲಿ ವೇಗದಲ್ಲಿ ನಿರಂತರ ಗಾಳಿಯೊಂದಿಗೆ ಭೂಕುಸಿತವನ್ನು ಉಂಟುಮಾಡಿತು. ನವೆಂಬರ್ 3ರಂದು ಇಟಾ ಚಂಡಮಾರುತ ಎದ್ದಿದ್ದ ಸರಿ ಸುಮಾರು 15ಮೈಲಿ ದೂರದಲ್ಲಿ ಅಯೋಟ ಚಂಡಮಾರುತವು ಭೂಕುಸಿತ ಉಂಟುಮಾಡಿದೆ.
ಮಧ್ಯ ಅಮೆರಿಕಾದಾದ್ಯಂತ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಹೊಂಡುರಾಸ್, ಉತ್ತರ ನಿಕರಾಗುವಾ, ಗ್ವಾಟೆಮಾಲಾ ಮತ್ತು ದಕ್ಷಿಣ ಬೆಲೀಜ್ 8 ರಿಂದ 16 ಇಂಚುಗಳಷ್ಟು ಮತ್ತು ಈಶಾನ್ಯ ನಿಕರಾಗುವಾ ಮತ್ತು ಉತ್ತರ ಹೊಂಡುರಾಸ್ನಲ್ಲಿ 20 ರಿಂದ 30 ಇಂಚುಗಳಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಅಯೋಟಾ ಚಂಡಮಾರುತ ಈ ಪ್ರದೇಶವನ್ನು ಅಪ್ಪಳಿಸಿದ ಎರಡನೇ ಪ್ರಮುಖ ಚಂಡಮಾರುತವಾಗಿದೆ. ನವೆಂಬರ್ 3 ರಂದು ಭೂಕುಸಿತ ಉಂಟಾಗಿ ಇಟಾ ಚಂಡಮಾರುತ ಉಂಟಾಗಿತ್ತು. ಇದರಿಂದಾಗಿ ನೂರಾರು ಜನ ಮೃತಪಟ್ಟು, ಸಾವಿರಾರು ಜನರನ್ನು ಸ್ಥಳಾಂತರಿಸಲಾಯಿತು, ಹಾಗೂ ನೂರಾರು ಮಂದಿ ಕಾಣೆಯಾಗಿದ್ದರು.