ವಾಷಿಂಗ್ಟನ್:ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿದೆ. ಈ ಮಧ್ಯೆ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಇದೀಗ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಯುಎಸ್ ಘಟಕವು ಟೆಕ್ಸಾಸ್‌ನಲ್ಲಿ Monkeypox ವೈರಸ್ ಸೋಂಕಿನ ಅಪರೂಪದ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ.
ನೈಜೀರಿಯಾದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಯುಎಸ್ ನಿವಾಸಿಯಲ್ಲಿ ಜುಲೈ 15 ರಂದು ಮಂಕಿಪಾಕ್ಸ್ ಪ್ರಕರಣ ಕಂಡುಬಂದಿದೆ ಎಂದು ಸಿಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಸೋಂಕಿತ ವ್ಯಕ್ತಿಯನ್ನು ಡಲ್ಲಾಸ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.