ಒಟ್ಟಾವಾ:ಕೆನಡಾದ ಸಂಸತ್ತಿನ ಸದಸ್ಯರೊಬ್ಬರು ಹೌಸ್ ಆಫ್ ಕಾಮನ್ಸ್‌ನ ವರ್ಚುವಲ್ ಸಭೆಯಲ್ಲಿ ಸಂಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಇದರಿಂದ ಸಹದ್ಯೋಗಿ ಸದಸ್ಯರು ಮುಜುಗರ ಅನುಭವಿಸಿದರು.
2015ರಿಂದ ಪಾಂಟಿಯಾಕ್‌ನ ಕ್ವಿಬೆಕ್ ಜಿಲ್ಲೆ ಪ್ರತಿನಿಧಿಸಿರುವ ವಿಲಿಯಂ ಅಮೋಸ್, ತನ್ನ ಸಹ ಶಾಸಕರಿದ್ದ ವರ್ಚುವಲ್ ಸಭೆಯ ಪರದೆಯ ಮೇಲೆ ಸಂಪೂರ್ಣವಾಗಿ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಕೆನಡಾದ ಬಹುತೇಕ ಶಾಸಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿವೇಶನಗಳಲ್ಲಿ ಭಾಗವಹಿಸುತ್ತಿದ್ದಾರೆ.