ಟೊರೊಂಟೊ(ಕೆನಡಾ): ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತರಾಗಿರುವವರಿಗೆ ಗೌರವ ಸೂಚಿಸುವ ಸಲುವಾಗಿ ಕೆನಡಾದಲ್ಲಿ ಹಾರಾಟ ನಡೆಸುತ್ತಿದ್ದ ಸ್ನೋಬರ್ಡ್ ಜೆಟ್ ಪತನವಾಗಿ ಮನೆಗೆ ಅಪ್ಪಳಿಸಿದ್ದು, ಓರ್ವ ಮಹಿಳಾ ಪೈಲಟ್ ಸಾವಿಗೀಡಾಗಿದ್ದಾರೆ.
ಕೊರೊನಾ ವಾರಿಯರ್ಸ್ಗೆ ಧನ್ಯವಾದ ಹೇಳಲು ಹೊರಟ ಜೆಟ್ ಪತನ: ಮಹಿಳಾ ಪೈಲಟ್ ಸಾವು - Coronavirus
ಕೆನಡಾದ ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸಲು ಹಾರಟ ನಡೆಸುತಿದ್ದ ಜೆಟ್ವೊಂದು ಪತನವಾಗಿ ಓರ್ವ ಮಹಿಳಾ ಪೈಲಟ್ ಸಾವಿಗೀಡಾಗಿದ್ದಾರೆ.

ಘಟನೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೋಬರ್ಡ್ಸ್ ವಕ್ತಾರರಾಗಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಜೆನ್ನಿಫರ್ ಕೇಸಿ ಅವರ ಸಾವು ಬೇಸರ ತರಿಸಿದೆ. ಮತ್ತೊಬ್ಬ ಪೈಲಟ್ ಕ್ಯಾಪ್ಟನ್ ರಿಚರ್ಡ್ ಮ್ಯಾಕ್‌ಡೊಗಾಲ್ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಜೆಟ್ ಪತನವಾದ ದೃಶ್ಯ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದ್ದು, ಕಮ್ಲೂಪ್ಸ್ ನಗರದ ವಿಮಾನ ನಿಲ್ದಾಣದಿಂದ 2 ಜೆಟ್ಗಳು ಟೇಕ್ ಆಫ್ ಆಗಿದ್ದವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದು ಜೆಟ್ ಇದ್ದಕ್ಕಿದ್ದಂತೆ ಎತ್ತರಕ್ಕೆ ಹಾರಿ ನೆಲಕ್ಕಪ್ಪಳಿಸಿದೆ. ಅಲ್ಲದೆ ಓರ್ವ ಪೈಲಟ್ ವಿಮಾನದಿಂದ ಜಿಗಿಯುವ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.