ಕರ್ನಾಟಕ

karnataka

ETV Bharat / international

ಕೆನಡಾದಲ್ಲಿ 2 ಕೊರೊನಾ ರೂಪಾಂತರ ಪ್ರಕರಣಗಳು ಪತ್ತೆ

ಬ್ರಿಟನ್​ನಲ್ಲಿ ಮೊದಲ ಬಾರಿಗೆ ಹೊಸ ರೂಪಾಂತರದ ಕೋವಿಡ್​-19 ವೈರಸ್​ ಪತ್ತೆಯಾಗಿದ್ದು, ಇದೀಗ ಕೆನಡಾದಲ್ಲಿ ಸಹ ಎರಡು ಪ್ರಕರಣಗಳು ದೃಢಪಟ್ಟಿವೆ.

ಕೊರೊನಾ ರೂಪಾಂತರ ಪ್ರಕರಣಗಳು ಪತ್ತೆ
ಕೊರೊನಾ ರೂಪಾಂತರ ಪ್ರಕರಣಗಳು ಪತ್ತೆ

By

Published : Dec 27, 2020, 10:22 AM IST

ಕೆನಡಾ: ಹೊಸ ರೂಪಾಂತರದ ಕೊರೊನಾ ವೈರಸ್ ಹಲವು ದೇಶಗಳಲ್ಲಿ ಆತಂಕ ಮೂಡಿಸಿದೆ. ಇದೀಗ ಕೋವಿಡ್​ ರೂಪಾಂತರದ ಮೊದಲ ಎರಡು ಪ್ರಕರಣಗಳು ಕೆನಡಾದಲ್ಲಿ ಸಹ ದೃಢಪಟ್ಟಿವೆ.

ಈ ಕುರಿತು ಒಂಟಾರಿಯೊದ ಸಹಾಯಕ ಮುಖ್ಯ ವೈದ್ಯಾಧಿಕಾರಿ ಡಾ. ಬಾರ್ಬರಾ ಯಾಫೆ ಮಾಹಿತಿ ನೀಡಿದ್ದು, ಡರ್ಹಾಮ್ ಪ್ರದೇಶದ ದಂಪತಿಯಲ್ಲಿ ಕೋವಿಡ್​ ರೂಪಾಂತರದ ಪ್ರಕರಣ ಕಂಡು ಬಂದಿದೆ. ಈಗಾಗಲೇ ಇವರ ಟ್ರಾವೆಲ್​ ಹಿಸ್ಟ್​ರಿ ಮತ್ತು ಸಂಪರ್ಕಿತರನ್ನು ಪತ್ತೆಹಚ್ಚಿದ್ದು, ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್​ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ರಿಟನ್​ನಲ್ಲಿ ಮೊದಲ ಬಾರಿಗೆ ಹೊಸ ರೂಪಾಂತರದ ಕೋವಿಡ್​-19 ವೈರಸ್​ ಪತ್ತೆಯಾಗಿದ್ದು, ಡೆನ್ಮಾರ್ಕ್, ಆಸ್ಟ್ರೇಲಿಯಾ , ಬೆಲ್ಜಿಯಂ, ದಕ್ಷಿಣ ಆಫ್ರಿಕಾ, ನೈಜೀರಿಯಾ, ಇಸ್ರೇಲ್​ನಲ್ಲಿ ಸಹ ರೂಪಾಂತರಗೊಂಡ ಕೊರೊನಾ ಪ್ರಕರಣಗಳು ಕಂಡುಬಂದಿವೆ.

ಈ ಸೋಂಕು ಅತಿ ವೇಗವಾಗಿ ಹರಡುತ್ತಿದೆ. ಆದರೂ ಸಹ ಯಾರು ಭಯ ಪಡುವ ಅಗತ್ಯವಿಲ್ಲ. ಅನಗತ್ಯ ಸಂಚಾರಕ್ಕೆ ಬ್ರೇಕ್​ ಹಾಕಿ, ಮನೆಯಲ್ಲಿಯೇ ಇರುವಂತೆ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details