ಒಟ್ಟಾವಾ [ಕೆನಡಾ]:ಒಟ್ಟಾವಾ ರಾಜಧಾನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಈ ನಗರದಲ್ಲಿ ನಡೆಯಿತು 'ನಿಯೋಜಿತ' ಶೂಟಿಂಗ್: ಒಬ್ಬ ಸಾವು , 3 ಮಂದಿಗೆ ಗಾಯ - ಒಟ್ಟಾವಾ ರಾಜಧಾನಿಯಲ್ಲಿ ನಡೆದ ಗುಂಡಿನ ದಾಳಿ
ಒಟ್ಟಾವಾ ರಾಜಧಾನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
![ಈ ನಗರದಲ್ಲಿ ನಡೆಯಿತು 'ನಿಯೋಜಿತ' ಶೂಟಿಂಗ್: ಒಬ್ಬ ಸಾವು , 3 ಮಂದಿಗೆ ಗಾಯ canada-1-killed-3-injured-in-ottawa-targeted-shooting](https://etvbharatimages.akamaized.net/etvbharat/prod-images/768-512-5645918-thumbnail-3x2-sanju.jpg)
ಒಟ್ಟಾವಾದಲ್ಲಿ 'ಟಾರ್ಗೆಟೆಡ್' ಶೂಟಿಂಗ್: ಒಬ್ಬ ಸಾವು , 3 ಮಂದಿಗೆ ಗಾಯ...
ಪೊಲೀಸರು ಇದನ್ನು ಉದ್ದೇಶಿತ ಶೂಟಿಂಗ್ ಎಂದು ಕರೆದಿದ್ದು, ಈ ಘಟನೆ ಕೆನಡಾದ ಸಂಸತ್ತು ಬಳಿ ನಡೆದಿದೆ ಎನ್ನಲಾಗಿದೆ.ಸ್ಥಳಕ್ಕೆ ಬಂದ ಪೊಲೀಸರು ಗುಂಡೇಟಿನ ಗಾಯಗಳೊಂದಿಗೆ ನಾಲ್ಕು ಜನರನ್ನು ಕಂಡಿದ್ದಾಗಿ ಸಂಕ್ಷಿಪ್ತ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು, ಹಾಗೆಯೇ ಘಟನಾ ಸ್ಥಳದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆಂದು ತಿಳಿಸಿದ್ದಾರೆ.
15 ವರ್ಷದ ಬಾಲಕನನ್ನು ಯಥಾಸ್ಥಿತಿಯಲ್ಲಿಯೇ ಒಟ್ಟಾವಾದ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವಾದ ಸಿಹೆಚ್‌ಒಗೆ ಕರೆದೊಯ್ಯಲಾಗಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.