ಕರ್ನಾಟಕ

karnataka

ETV Bharat / international

ಟ್ರಂಪ್​ರನ್ನು ಭೇಟಿ ಮಾಡಿದ್ದ ಬ್ರೆಜಿಲ್ ಮಾಧ್ಯಮ ವಕ್ತಾರನಿಗೆ ಕೊರೊನಾ! - ಬ್ರೆಜಿಲ್ ಸರ್ಕಾರದ ಮಾಧ್ಯಮ ವಕ್ತಾರ ಫ್ಯಾಬಿಯೊ ವಾಜ್‌ಗಾರ್ಟನ್

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಭೇಟಿಯಾಗಿದ್ದ ಬ್ರೆಜಿಲ್ ಸರ್ಕಾರದ ಮಾಧ್ಯಮ ವಕ್ತಾರ ಫ್ಯಾಬಿಯೊ ವಾಜ್‌ಗಾರ್ಟನ್​ ಕೊವಿಡ್​-19 ಕಾಯಿಲೆಗೆ ಒಳಗಾಗಿರುವುದು ದೃಢಪಟ್ಟಿದೆ.

Brazilian who met Trump tests positive for COVID-19
ಟ್ರಂಪ್

By

Published : Mar 12, 2020, 11:40 PM IST

ಬ್ರೆಸಿಲಿಯಾ: ಕಳೆದ ವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಫ್ಲೋರಿಡಾ ರೆಸಾರ್ಟ್‌ನಲ್ಲಿ ಭೇಟಿಯಾಗಿದ್ದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊರ ಮಾಧ್ಯಮ ವಕ್ತಾರ ಇದೀಗ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಬ್ರೆಜಿಲ್ ಸರ್ಕಾರ ತಿಳಿಸಿದೆ.

ಬ್ರೆಜಿಲ್ ಸರ್ಕಾರದ ಮಾಧ್ಯಮ ವಕ್ತಾರ ಫ್ಯಾಬಿಯೊ ವಾಜ್‌ಗಾರ್ಟನ್, ಕಳೆದ ಶನಿವಾರದಿಂದ ಮಂಗಳವಾರದವರೆಗೆ ಬೋಲ್ಸೊನಾರೊರೊಂದಿಗೆ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಟ್ರಂಪ್​ರನ್ನು ಭೇಟಿಯಾಗಿದ್ದರು. ಅಲ್ಲದೇ ಟ್ರಂಪ್ ಪಕ್ಕದಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ಸಹ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು.

ಭೇಟಿಯ ಬಳಿಕ ದೇಶಕ್ಕೆ ಹಿಂದಿರುಗಿದ್ದ ಫ್ಯಾಬಿಯೊ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೀಗ ಅವರು ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊವಿಡ್​-19ಗೆ ಒಳಗಾಗಿರುವುದು ದೃಢಪಟ್ಟಿದೆ.

ABOUT THE AUTHOR

...view details