ಕರ್ನಾಟಕ

karnataka

ETV Bharat / international

ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮುಸುಡಿಗೆ ಗುದ್ದುತ್ತೇನೆ ಎಂದ ಬ್ರೆಜಿಲ್ ಅಧ್ಯಕ್ಷ - ಪತ್ರಕರ್ತನ್ನು ಬೆದರಿಸಿದ ಬ್ರೆಜಿಲ್ ಅಧ್ಯಕ್ಷ

ಬ್ರೆಜಿಲಿಯಾದ ಮೆಟ್ರೋಪಾಲಿಟನ್ ಕ್ಯಾಥೆಡ್ರಲ್‌ಗೆ ಭೇಟಿ ನೀಡಿದ ಬಳಿಕ ಪ್ರತಿದಿನದಂತೆ ಮಾಧ್ಯಮದ ಮುಂದೆ ಬಂದ ಅಧ್ಯಕ್ಷ ಬೊಲ್ಸನಾರೊಗೆ ಪತ್ರಕರ್ತ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಬೊಲ್ಸನಾರೊ, ಪತ್ರಕರ್ತನ ಮುಸುಡಿಗೆ ಗುದ್ದುವುದಾಗಿ ಬೆದರಿಕೆ ಹಾಕಿದ್ದಾರೆ.

Brazilian presindent threatened to journalist
ಪತ್ರಕರ್ತನ್ನು ಬೆದರಿಸಿದ ಬ್ರೆಜಿಲ್ ಅಧ್ಯಕ್ಷ

By

Published : Aug 24, 2020, 6:05 PM IST

ಸಾವೊ ಪಾಲೊ :ಭ್ರಷ್ಟಾಚಾರದ ಪ್ರಕರಣದಲ್ಲಿ ತನ್ನ ಪತ್ನಿಯ ಪಾತ್ರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮುಸುಡಿಗೆ ಗುದ್ದುವುದಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ.

ಬ್ರೆಜಿಲಿಯಾದ ಮೆಟ್ರೋಪಾಲಿಟನ್ ಕ್ಯಾಥೆಡ್ರಲ್‌ಗೆ ಭೇಟಿ ನೀಡಿದ ಬಳಿಕ ಪ್ರತಿದಿನದಂತೆ ಮಾಧ್ಯಮದ ಮುಂದೆ ಬಂದ ಅಧ್ಯಕ್ಷ ಬೊಲ್ಸನಾರೊಗೆ ಪತ್ರಕರ್ತ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಬೊಲ್ಸನಾರೊ, ಪತ್ರಕರ್ತನ ಬಾಯಿಗೆ ಗುದ್ದುವುದಾಗಿ ಬೆದರಿಕೆ ಹಾಕಿದ್ದಾರೆ. ಇತರ ಮಾಧ್ಯಮದವರು ಅಧ್ಯಕ್ಷರನ್ನು ಮಾತನಾಡಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಬ್ರೆಜಿಲ್​ನ ಪ್ರಥಮ ಮಹಿಳೆ ಮಿಚೆಲ್ ಬೋಲ್ಸನಾರೊ, ಅಧ್ಯಕ್ಷರಿಗೆ ಆಪ್ತನಾಗಿರುವ ನಿವೃತ್ತ ಪೊಲೀಸ್​ ಅಧಿಕಾರಿ ಮತ್ತು ಪ್ರಸ್ತುತ ಸೆನೆಟರ್ ಆಗಿರುವ ಅವರ ಮಗ ಫ್ಲೇವಿಯೊ ಬೋಲ್ಸನಾರೊ ಅವರ ಮಾಜಿ ಸಲಹೆಗಾರ ಫ್ಯಾಬ್ರಿಸಿಯೊ ಕ್ವಿರೊಜ್​ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವರದಿ ಕ್ರೂಸೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಕುರಿತು ಓ ಗ್ಲೋಬೊ ವರದಿಗಾರ ಪ್ರಶ್ನಿಸಿದ್ದಕ್ಕೆ ಅಧ್ಯಕ್ಷರು ಪತ್ರಕರ್ತನ ವಿರುದ್ಧ ಕೆಂಡಾ ಮಂಡಲರಾಗಿದ್ದಾರೆ.

2019 ರಲ್ಲಿ ಜೈರ್​ ಅಧ್ಯಕ್ಷರಾಗುವ ಮೊದಲು ಅವರ ಮಗ ಫ್ಲೇವಿಯೊ ಬೋಲ್ಸನಾರೊ ರಿಯೊ ಡಿ ಜನೈರೊದಲ್ಲಿ ಶಾಸಕನಾಗಿದ್ದರು. ಈ ವೇಳೆ ಸರ್ಕಾರಿ ನೌಕರರಿಗೆ ವೇತನ ವಂಚಿಸಿದ ಆರೋಪದ ಕೇಳಿ ಬಂದಿದೆ ಮತ್ತು ಫ್ಲೇವಿಯೊ ಬೋಲ್ಸನಾ ಮತ್ತು ಕ್ವಿರೊಜ್​ ವಿರುದ್ಧ ತನಿಖೆ ನಡೆಯುತ್ತಿದೆ.

ಪತ್ರಿಕೆಯ ವರದಿಯ ಪ್ರಕಾರ, ಕ್ವಿರೋಜ್ 2011 ಮತ್ತು 2016 ರ ನಡುವೆ ಮಿಚೆಲ್ ಬೋಲ್ಸನಾರೊ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದರು ಎನ್ನಲಾಗ್ತಿದೆ. ಆದರೆ, ಆಧ್ಯಕ್ಷರ ಪತ್ನಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

ABOUT THE AUTHOR

...view details