ಸಾವೊ ಪಾಲೊ (ಬ್ರೆಜಿಲ್):ಕೊರೊನಾ ಸಾಂಕ್ರಾಮಿಕ ರೋಗದಿಂದ ಬ್ರೆಜಿಲ್ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು ಒಂದು ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,00,000 ದ ಗಟಿ ದಾಟಿದೆ.
ಕೋವಿಡ್ ಸೋಂಕಿತರಿಂದ ಕಿಕ್ಕಿರಿದ ಆಸ್ಪತ್ರೆಗಳಲ್ಲಿ ಪ್ರತಿದಿನ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದ ಆರೋಗ್ಯ ಸಚಿವಾಲಯವು ತಿಂಗಳ ಆರಂಭದಲ್ಲಿ ಎರಡು ದಿನಗಳಲ್ಲಿ 4,000 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ. ಏಳು ದಿನಗಳ ಸರಾಸರಿ 3,100 ಕ್ಕಿಂತ ಹೆಚ್ಚಾಗಿದೆ. ಬ್ರೆಜಿಲ್ನ ಒಟ್ಟು ಸಾವಿನ ಸಂಖ್ಯೆ 4,01,186 ಕ್ಕೆ ಏರಿದೆ.
ಡಿಸೆಂಬರ್ನಲ್ಲಿ ಇಲ್ಲಿನ ಮನೌಸ್ನಲ್ಲಿ ಮತ್ತು ನಗರದ ಸುತ್ತಮುತ್ತ ಹೊರಹೊಮ್ಮಿದ ರೂಪಾಂತರ ಕೊರೊನಾ ವೈರಸ್ನ "ಬ್ರೆಜಿಲ್ ರೂಪಾಂತರ"ದ ಇತ್ತೀಚಿನ ಉಲ್ಬಣವನ್ನು ತಜ್ಞರು ದೂಷಿಸಿದ್ದಾರೆ.