ಕರ್ನಾಟಕ

karnataka

By

Published : Mar 25, 2021, 12:07 PM IST

ETV Bharat / international

ಬ್ರೆಜಿಲ್​ನಲ್ಲಿ ಕೊರೊನಾ ಮರಣ ಮೃದಂಗ... ಕೇವಲ 75 ದಿನಗಳಲ್ಲಿ ಲಕ್ಷ ಜನ ಬಲಿ!

ಬ್ರೆಜಿಲ್​ ದೇಶದಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಕೊರೊನಾ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರದಂದು 3 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಬುಧವಾರ 2 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈಗ ವಿಶ್ವದಲ್ಲಿ ಕೊರೊನಾ ಸಾವಿನ ಪ್ರಕರಣದಲ್ಲಿ ಬ್ರೆಜಿಲ್​ ಎರಡನೇ ಸ್ಥಾನದಲ್ಲಿದೆ.

Brazil second nation to top, Brazil second nation to top in COVID deaths, Brazil coronavirus cases, Brazil coronavirus deaths, Brazil coronavirus deaths news, ಬ್ರೆಜಿಲ್​ ಎರಡನೇ ರಾಷ್ಟ್ರ, ಕೋವಿಡ್​ ಸಾವಿನಲ್ಲಿ ಬ್ರೆಜಿಲ್​ ಎರಡನೇ ರಾಷ್ಟ್ರ, ಬ್ರೆಜಿಲ್​ ಕೊರೊನಾ ಪ್ರಕರಣಗಳು, ಬ್ರೆಜಿಲ್​ ಕೊರೊನಾ ಸಾವುಗಳು, ಬ್ರೆಜಿಲ್​ ಕೊರೊನಾ ಸಾವು ಪ್ರಕರಣ ಸುದ್ದಿಗಳು,
ಕೇವಲ 75 ದಿನಗಳಲ್ಲಿ ಲಕ್ಷ ಜನ ಸಾವು

ಸಾವೊ ಪಾಲೊ:ಬ್ರೆಜಿಲ್​ನಲ್ಲಿ​ ಕೊರೊನಾ ಮಹಾಮಾರಿ ಮರಣಮೃದಂಗ ಬಾರಿಸುತ್ತಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈ ದೇಶದ ಜನರು ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದಾರೆ.

ಮಂಗಳವಾರ 3,251 ಜನ ಕೊರೊನಾದಿಂದ ಮೃತಪಟ್ಟಿದ್ದರು. ಆದ್ರೆ ಬುಧವಾರವೂ ಸಹ 2,009 ಜನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಬ್ರೆಜಿಲ್​ನ ಆರೋಗ್ಯ ಇಲಾಖೆ ತಿಳಿಸಿದೆ.

ಈಗಾಗಲೇ ಬ್ರೆಜಿಲ್​ನಲ್ಲಿ ಕೊರೊನಾ ಸಾವಿನ ಪ್ರಕರಣಗಳು 3,00,000ಕ್ಕೆ ತಲುಪಿದೆ. ಈ ಮೂಲಕ ವಿಶ್ವದಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಪಟ್ಟಿಯಲ್ಲಿ ಈ ದೇಶ​ ಎರಡನೇ ಸ್ಥಾನಕ್ಕೇರಿದೆ. ಡಿಸೆಂಬರ್ 14, 2020ರಲ್ಲಿ ಈ ರೀತಿಯ ಸಾವಿನ ಸಂಖ್ಯೆ ಅಮೆರಿಕದಲ್ಲಿತ್ತು.

ಕೇವಲ 75 ದಿನಗಳಲ್ಲಿ ಬ್ರೆಜಿಲ್ 1,00,000 ಸಾವುಗಳನ್ನು ಕಂಡಿದೆ. ರಾಜಕೀಯ ಸಮನ್ವಯದ ಕೊರತೆ, ಹೊಸ ರೂಪಾಂತರಗಳು ಹೆಚ್ಚು ಸುಲಭವಾಗಿ ಹರಡುತ್ತಿರುವುದು ಮತ್ತು ದೇಶದ ಅನೇಕ ಭಾಗಗಳಲ್ಲಿ ಆರೋಗ್ಯ ಪ್ರೋಟೋಕಾಲ್‌ಗಳನ್ನು ಕಡೆಗಣಿಸುತ್ತಿರುವುದಕ್ಕೆ ಈ ರೀತಿ ಕೊರೊನಾ ಉಲ್ಬಣಗೊಳ್ಳುತ್ತಿದೆ ಎಂದು ಸ್ಪೈಕ್ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details