ಸಾವೋಪೌಲೋ(ಬ್ರೆಜಿಲ್):ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಭಾರತ ಸೇರಿದಂತೆ ಕೆಲ ದೇಶಗಳಿಗೆ ವೀಸಾ ವಿನಾಯಿತಿ ಘೋಷಣೆ ಮಾಡಿದ್ದಾರೆ.
ಈ ದೇಶಕ್ಕೆ ಪ್ರಯಾಣಿಸಲು ಇನ್ಮುಂದೆ ವೀಸಾ ಬೇಡ.. ಭಾರತೀಯರಿಗೆ ಗುಡ್ ನ್ಯೂಸ್ ಕೊಟ್ಟ ಸಾಕರ್ ನಾಡು! - ಜೈರ್ ಬೊಲ್ಸೊನಾರೊ ಲೇಟೆಸ್ಟ್ ಸುದ್ದಿ
ಚೀನಾ ಪ್ರವಾಸ ಕೈಗೊಂಡಿರುವ ಬೊಲ್ಸೊನಾರೊ, ಚೀನಾ ಹಾಗೂ ಭಾರತದಿಂದ ಬ್ರೆಜಿಲ್ಗೆ ಪ್ರಯಾಣಿಸುವ ಪ್ರವಾಸಿಗರಿಗೆ ಹಾಗೂ ಉದ್ಯಮಿಗಳಿಗೆ ವೀಸಾ ಸಡಿಲಿಕೆ ಮಾಡಿದ್ದಾರೆ.
ವೀಸಾ ವಿನಾಯಿತಿ
ಬಲಪಂಥೀಯ ಸಿದ್ಧಾಂತದ ಬೊಲ್ಸೊನಾರೊ ಈ ವರ್ಷದ ಆರಂಭದಲ್ಲಿ ಬ್ರೆಜಿಲ್ ದೇಶದ ಅಧ್ಯಕ್ಷ ಗಾದಿಗೆ ಏರಿದ್ದರು. ಆ ಬಳಿಕ ಕೆಲ ತಿಂಗಳಲ್ಲಿ ಅಮರಿಕ, ಕೆನಡಾ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳಿಂದ ಬ್ರೆಜಿಲ್ಗೆ ಪ್ರಯಾಣಿಸುವವರಿಗೆ ವೀಸಾ ವಿನಾಯಿತಿ ಘೋಷಿಸಲಾಗಿತ್ತು.
ಇದೀಗ ಚೀನಾ ಪ್ರವಾಸ ಕೈಗೊಂಡಿರುವ ಬೊಲ್ಸೊನಾರೊ, ಚೀನಾ ಹಾಗೂ ಭಾರತದಿಂದ ಬ್ರೆಜಿಲ್ಗೆ ಪ್ರಯಾಣಿಸುವ ಪ್ರವಾಸಿಗರಿಗೆ ಹಾಗೂ ಉದ್ಯಮಿಗಳಿಗೆ ವೀಸಾ ಸಡಿಲಿಕೆ ಮಾಡಿದ್ದಾರೆ.